ವೀರಾಜಪೇಟೆ, ಜ. ೧೩: ಜಿಲ್ಲೆಯ ಗಡಿ ಭಾಗ ಮಾಕುಟ್ಟ ಚೆಕ್ಪೋಸ್ಟ್ ಮೂಲಕ ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರುಗಳ ವಾಹನದ ಮೇಲೆ ಆರ್.ಟಿ.ಓ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಇದರಿಂದ ಸಕಾಲಕ್ಕೆ ದೇವಾಲಯಕ್ಕೆ ತೆರಳಲು ಸಾಧ್ಯವಾಗದೇ ಅಯ್ಯಪ್ಪ ಮಾಲಾಧಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಭಕ್ತರಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ಜೆ.ಡಿ.ಎಸ್. ವೀರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ಆಕ್ಷೇಪಿಸಿದ್ದಾರೆ.
ಕೆಲವು ಬಡವರು ಹಾಗೂ ಮಧ್ಯಮ ವರ್ಗದ ಭಕ್ತರು ಶಬರಿಮಲೆಗೆ ತೆರಳಲು ಕೇರಳದಿಂದ ರಾಷ್ಟಿçÃಯ ರಹದಾರಿ ಇರುವ ವಾಹನವನ್ನು ವೀರಾಜಪೇಟೆಗೆ ಕರೆಸಿಕೊಂಡು ಅಯ್ಯಪ್ಪ ದೇವರ ದರ್ಶನ ಮಾಡಲು ತೆರಳುತ್ತಾರೆ. ರಾಷ್ಟಿçÃಯ ರಹದಾರಿ ಪಡೆದ ವಾಹನ ದೇಶದ ಯಾವ ಮೂಲೆಗೂ ಬೇಕಾದರೂ ತೆರಳಬಹುದಾಗಿದೆ. ಅಲ್ಲದೇ ಕೇರಳದಿಂದ ಬರುವ ವಾಹನಗಳು ಇಲ್ಲಿನ ವಾಹನಗಳಿಗಿಂತ ಸ್ವಲ್ಪ ಕಡಿಮೆ ದರ ತೆಗೆದುಕೊಳ್ಳುವುದರಿಂದ ಇಲ್ಲಿನ ಭಕ್ತರಿಗೆ ಅನುಕೂಲವಾಗುತ್ತಿದೆ.
ಕೇರಳ ನೋಂದಾವಣಿ ಹೊಂದಿದ ಲಾರಿಗಳು ಹಾಗೂ ಇತರ ವಾಹನಗಳು ಪ್ರತೀದಿನ ಅಂತರಾಜ್ಯ ಗಡಿ ಮಾಕುಟ್ಟದ ಮೂಲಕ ತೆರಳುತ್ತಿದೆ. ಅಂತಹ ಯಾವುದೇ ವಾಹಗಳನ್ನು ಆರ್.ಟಿ.ಓ ಅಧಿಕಾರಿಗಳು ಪರಿಶೀಲನೆ ನಡೆಸದೆ ಕೇವಲ ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರ ವಾಹನಗಳ ಮೇಲೆ ದಬ್ಬಾಳಿಕೆ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಹೇಳಿದ ಅವರು ಕೂಡಲೇ ಜಿಲ್ಲೆಯ ಶಾಸಕರು ಮಧ್ಯೆ ಪ್ರವೇಶಿಸಿ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಆಗ್ರಹಿಸಿದ್ದಾರೆ.