ಸೋಮವಾರಪೇಟೆ: ಚಿಕ್ಕ ವಯಸ್ಸಿನಲ್ಲಿಯೇ ಪ್ರಪಂಚದ ಗಮನವನ್ನು ಭಾರತದತ್ತ ಸೆಳೆದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜೀವನವೊಂದು ಅಧ್ಯಯನ ಯೋಗ್ಯ ಗ್ರಂಥವಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಬಣ್ಣಿಸಿದರು.

ಕೊಡಗು ಪತ್ರಕರ್ತರ ಸಂಘ ಹಾಗೂ ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಕಾಗೋ ಭಾಷಣದ ಮೂಲಕ ಇಡೀ ವಿಶ್ವದ ಗಮನವನ್ನು ಭಾರತದತ್ತ ಸೆಳೆದು, ಇಲ್ಲಿನ ಸಂಸ್ಕಾರ, ಅಧ್ಯಾತ್ಮಿಕತೆಯ ಬಗ್ಗೆ ಜಾಗೃತಿ ಮೂಡಿಸಿದ ವಿವೇಕಾನಂದರು ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದ್ದಾರೆ. ದೇಶದ ಯುವ ಜನಾಂಗದ ಮೇಲೆ ಅಪಾರವಾದ ನಿರೀಕ್ಷೆಯಿಟ್ಟಿದ್ದ ವಿವೇಕಾನಂದರ ನಿರೀಕ್ಷೆಯಂತೆ ಯುವ ಜನಾಂಗ ರಾಷ್ಟಾçಭಿಮಾನ ಮೂಡಿಸಿಕೊಂಡು, ಅವರ ಆದರ್ಶಗಳನ್ನು ಪಾಲಿಸುವಂತಾ ಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ದಲಿಂಗಪುರ ಅರಸಿನಕುಪ್ಪೆ ಗ್ರಾಮದ ಶ್ರೀ ಮಂಜುನಾಥಸ್ವಾಮೀ ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‌ನಾಥ್‌ಜೀ ಮಾತನಾಡಿ, ಅಪ್ರತಿಮ ಧೀರ ಸನ್ಯಾಸಿ ವಿವೇಕಾನಂದರ ಚಿರಂಜೀವಿತ್ವಕ್ಕೆ ಅವರ ಜೀವನದ ಆದರ್ಶಗಳೇ ಕಾರಣವಾಗಿವೆ. ನಿರ್ಭೀತಿಯಿಂದ ವೀರತ್ವ ಪಡೆದ ಸ್ವಾಮಿ ವಿವೇಕಾನಂದ ಅವರ ಜೀವನ ಮಾರ್ಗ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಪಾಠ ಪ್ರವಚನದೊಂದಿಗೆ ನೈತಿಕ ಶಿಕ್ಷಣ ನೀಡಬೇಕು. ಸಂಸ್ಕಾರ, ಸಂಪ್ರದಾಯ, ಧಾರ್ಮಿಕತೆಯ ಬಗ್ಗೆ ತಿಳಿಸಬೇಕು. ಸಂಸ್ಕಾರವಿಲ್ಲದ ವಿದ್ಯೆ ವ್ಯರ್ಥ ಎಂಬುದನ್ನು ಮನಗಾಣಬೇಕು ಎಂದು ಕಿವಿಮಾತು ನುಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಮಾತನಾಡಿ, ವಿವೇಕಾ ನಂದರು ಭಾರತ ಪುನರುಜ್ಜೀವನದ ಹರಿಕಾರ. ಧನಾತ್ಮಕ ಆಲೋಚನೆಗಳಿಗೆ ಸ್ಫೂರ್ತಿಯ ಚಿಲುಮೆ. ರಾಷ್ಟç ಪ್ರೇಮವನ್ನು ಉದ್ದೀಪನಗೊಳಿಸುವ ಸಂತ ಎಂದು ವಿಶ್ಲೇಷಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜೀ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳಿಧರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.೧೦೦ ಅಂಕಗಳಿಸಿದ ವಿಷಯವಾರು ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು. ವಿವೇಕಾನಂದರ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಯೋಗ ಶಿಕ್ಷಕರು, ದಾನಿ ಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎಂ. ಚಂದ್ರಾಜು, ಕಾರ್ಯದರ್ಶಿ ವೆಂಕಟೇಶ್, ಗಜೇಂದ್ರ, ಪ್ರಶಾಂತ್, ಪ್ರೇಮಾ ಹೃಷಿಕೇಷ್, ಲತಾ, ಮುಖ್ಯೋಪಾಧ್ಯಾಯಿನಿ ಲಕ್ಷಿö್ಮÃ, ಪತ್ರಕರ್ತರ ಸಂಘದ ಕವನ್ ಕಾರ್ಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.