ಮಡಿಕೇರಿ, ಜ. ೧೩: ಮೇಕೇರಿ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಬೂತ್ ಮಟ್ಟದ ಸಭೆ ನಡೆಯಿತು. ಪಕ್ಷ ಸಂಘಟನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಪಕ್ಷದ ಕಾರ್ಯ ಕರ್ತರಿಗೆ ತಿಳಿಸಲಾಯಿತು. ಸಭೆಯಲ್ಲಿ ಜಿಲ್ಲಾ ರೈತ ಮೋರ್ಚಾದ ಸಹ ಕಾರ್ಯದರ್ಶಿ ಪೈಕೇರ ಮನೋಹರ್ ಮಾದಪ್ಪ. ಬೂತ್ ಅಧ್ಯಕ್ಷರುಗಳು ಶಕ್ತಿ ಕೇಂದ್ರ ಪ್ರಮುಖರಾದ ಕಿರಣ್, ಮೇಕೇರಿ ಗ್ರಾ.ಪಂ. ವಿಸ್ತಾರಕ ಪಿ.ಪಿ. ಸುಕುಮಾರ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಕಾರ್ಯಕರ್ತರ ಮನೆಗಳಿಗೆ ಧ್ವಜ ನೀಡಲಾಗಿ ಭೂತ್ ಅಧ್ಯಕ್ಷ ಅಳಗರಾಜು ಅವರ ಮನೆಯಲ್ಲಿ ಪಕ್ಷದ ಧ್ವಜಾರೋಹಣ ಮಾಡಲಾಯಿತು.