ರತ್ನ ಚರ್ಮಣ
ನಾಪೋಕ್ಲು, ಜ. ೧೨: ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ಮತ್ತು ಪೋಷಕರ ನಿರೀಕ್ಷೆಯನ್ನು ಹುಸಿಗೊಳಿಸದೆ ಮಕ್ಕಳ ಭವಿಷ್ಯವನ್ನು ರೂಪಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಸ್ಥಳೀಯ ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ರತ್ನ ಚರ್ಮಣ ಹೇಳಿದರು. ಅಂಕುರ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ ಪಾಠದ ಜೊತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಕೊಳ್ಳಲಾಗುತ್ತಿದ್ದು ಇದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿ ಯಾಗಲಿದೆ ಎಂದ ಅವರು ಸಂಸ್ಥೆಯ ಧೇಯೋದ್ಧೇಶ ಹಾಗೂ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಮೆಲುಕು ಹಾಕಿದರು.
ಸಮಾರಂಭದ ಉದ್ಘಾಟನೆ ಯನ್ನು ಸಂಸ್ಥೆಯ ಅಧ್ಯಕ್ಷ ಕೇಟೋಳಿರ ರಾಜಾ ಚರ್ಮಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಟ್ರಸ್ಟ್ ಕಾಮೆಯಂಡ ಕರುಂಬಯ್ಯ, ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾಟಂಡ ಪೂಣಚ್ಚ, ಪೆಮ್ಮುಡಿಯಂಡ ಅಪ್ಪಣ್ಣ, ಮುಕ್ಕಾಟಿರ ವಿನಯ್, ಕುಂಡಿಯೋಳAಡ ಗಣೇಶ್ ಮುತ್ತಪ್ಪ, ಬಡುವಂಡ ಅರುಣ್ ಅಪ್ಪಚ್ಚು, ಮುಂಡAಡ ಜಯಕುಮಾರ್, ಕೇಟೋಳಿರ ಗಾಯನ್ ಗೌರಮ್ಮ, ಕನ್ನಂಬೀರ ಸುಧಿ ತಿಮ್ಮಯ್ಯ ಸೇರಿದಂತೆ ಪೋಷಕರು. ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕಿ ದೇಚಮ್ಮ ಸ್ವಾಗತಿಸಿ, ಬೊಳ್ಯಪಂಡ ಆಶಾ ಬೋಪಣ್ಣ ಮತ್ತು ಬಲ್ಯಾಟಂಡ ಡಿಶ್ಮ ಕುಟ್ಟಯ್ಯ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಮಣವಟ್ಟಿರ ಜೀವಿತ್ ಬೆಳ್ಯಪ್ಪ ವರದಿ ವಾಚಿಸಿ ವಂದಿಸಿದರು. ಈ ಸಂದರ್ಭ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ಅರ್ಹತಾ ಪತ್ರವನ್ನು ವಿತರಿಸಿದರು.
ವಿದ್ಯಾರ್ಥಿಗಳಿಂದ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಸಭಿಕರನ್ನು ರಂಜಿಸಿತು.