ಸೋಮವಾರಪೇಟೆ, ಜ. ೧೨: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸಂಘದ ಉದ್ಘಾಟನೆ, ರಾಷ್ಟಿçÃಯ ಯುವ ಸಪ್ತಾಹ ದಿನಾಚರಣೆ ಹಾಗೂ ಯೋಧ ನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಉದ್ಘಾಟಿಸಿದರು. ನಂತರ ಮಾತನಾಡಿ, ಇತಿಹಾಸ ಕಲಿತವರು ದೇಶದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದ್ದಾರೆ. ಇತಿಹಾಸವನ್ನು ತಾತ್ಸಾರ ಮಾಡಬಾರದು ಎಂದರು.
ಜನರ ಮನಸ್ಸಿನಲ್ಲಿ ಸ್ವಾಮಿ ವಿವೇಕಾನಂದರು ೧೩೯ ವರ್ಷಗಳ ನಂತರವೂ ಉಳಿಯಲು ಅವರು ತೋರಿದ ಸನ್ಮಾರ್ಗವೇ ಕಾರಣವಾಗಿದೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಕುಟುಂಬ ಮತ್ತು ದೇಶಕ್ಕೆ ವಿದ್ಯಾರ್ಥಿಗಳು ಕೀರ್ತಿ ತರಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಚಿಕ್ಕ ಅಳುವಾರದ ಸ್ನಾತಕ್ಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಜಮೀರ್ ಅಹಮ್ಮದ್ ಮಾತನಾಡಿ, ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕೋಮುಭಾವನೆ ಬಿತ್ತುವುದು ದೇಶಕ್ಕೆ ಮಾರಕವಾಗಿದೆ. ಅನಂತ ಉತ್ಸಾಹ, ಸಹನೆ ಮತ್ತು ತಾಳ್ಮೆ ಇದ್ದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯ. ವಿಶ್ವದಲ್ಲಿ ಹೆಣ್ಣಿಗೆ ಸ್ಥಾನಮಾನ ಕಲ್ಪಿಸಿ, ಭಾರತೀಯ ಸಂಸ್ಕೃತಿ ಪಸರಿಸಲು ವಿವೇಕಾನಂದರೇ ಕಾರಣರಾಗಿದ್ದಾರೆ ಎಂದರು.
ಸುAಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ, ಯೋಧರು ತಮ್ಮ ಜೀವವನ್ನು ಒತ್ತೆ ಇಟ್ಟು ದೇಶ ರಕ್ಷಣೆ ಮಾಡುತ್ತಿದ್ದಾರೆ. ಇದುವರೆಗೆ ಸಿಯಾಚಿನ್‌ನ ಹಿಮ ಪರ್ವತದಲ್ಲಿ ಕೆಲಸ ಮಾಡುತ್ತಿರುವ ಸೈನಿಕರಲ್ಲಿ ೨ಸಾವಿರ ಮಂದಿ ತಮ್ಮ ಪಾಣತ್ಯಾಗ ಮಾಡಿದ್ದಾರೆ. ನಮ್ಮ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಗೌರವ ನೀಡುವುದರೊಂದಿಗೆ ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಎಂದರು.
ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಧರ್ಮದ ಬೋಧನೆ ಮಾಡುವುದನ್ನು ನಿಲ್ಲಿಸಿ ದೇಶ ಪ್ರೇಮವನ್ನು ಅವರ ಮನಸ್ಸಿನಲ್ಲಿ ಬಿತ್ತುವ ಕೆಲಸವಾಗಲಿ. ಕೇಂದ್ರ ಸರ್ಕಾರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಹಾಗೂ ಜನರಲ್ ಬಿಪಿನ್ ರಾವತ್ ಅವರುಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕೆಂದು ಅಭಿಪ್ರಾಯಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಎಚ್.ಎನ್. ರಾಜು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ಎಂ.ಎಸ್. ಶಿವಮೂರ್ತಿ, ಇತಿಹಾಸ ಸಂಘದ ಸಂಚಾಲಕ ಎಂ.ಎಸ್. ಸುನೀಲ್, ಇತಿಹಾಸ ಸಂಘದ ಅಧ್ಯಕ್ಷ ದಿಲೀಪ್ ಉಪಸ್ಥಿತರಿದ್ದರು. ಇದೇ ಸಂದರ್ಭ ಕಳೆದ ಬಾರಿಯ ಇತಿಹಾಸ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ತೇಜಸ್ವಿನಿ ಮತ್ತು ಸುಶ್ಮಿತಾ ಅವರುಗಳನ್ನು ಸನ್ಮಾನಿಸಲಾಯಿತು.