ವೀರಾಜಪೇಟೆ, ಜ. ೧೨: ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವಚಿಂತನ ಗೋಷ್ಠಿಯ ೨೦೬ನೇ ಕಿರಣ ಕಾರ್ಯಕ್ರಮ ನಡೆಯಿತು. ನಾಪೋಕ್ಲುವಿನ ಕಾಫಿ ಬೆಳೆಗಾರ ನೂರಾಂಬಡ ಎಸ್. ಉದಯಶಂಕರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ರಾಷ್ಟçದ ಪ್ರಗತಿಯಲ್ಲಿ ಕೃಷಿಕರ ಪಾತ್ರ ಅತ್ಯಮೂಲ್ಯವಾದದ್ದು. ಆದರೂ ಸರಕಾರಗಳ ನೀತಿಗಳು ಕೃಷಿಕರ ಪರವಾಗಿಲ್ಲ. ಕೃಷಿಕರು ತಮ್ಮ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ಆರ್ಥಿಕವಾಗಿ ದುಸ್ಥಿತಿ ಅನುಭವಿಸುತ್ತಿದ್ದಾರೆ ಎಂದರು.
ಮಡಿಕೇರಿಯ ಕಾಫಿ ಉದ್ಯಮಿ, ಕೆ.ಕೆ. ವಿಶ್ವನಾಥ್ ಕಾಫಿ ಕೃಷಿ, ಅಂದು-ಇAದು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಬೆಳೆಗಾರರು ಉತ್ಪನ್ನಗಳಿಗೆ ಮಾರುಕಟ್ಟೆ ಕಂಡು ಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆ. ವನ್ಯಜೀವಿಗಳ ಉಪಟಳದಿಂದಾಗಿ ಕಾಫಿ ಬೆಳೆಗಾರರು ಆತಂಕದ ಬದುಕನ್ನು ಸಾಗಿಸುತ್ತಿದ್ದಾರೆ. ಇದು ಉತ್ಪನ್ನಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ವಿದೇಶ ರಾಷ್ಟçಗಳಿಗೆ ಹೋಲಿಸಿದಲ್ಲಿ ನಮ್ಮ ಬೆಳೆಗಾರರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸುವಲ್ಲಿ ಬಹಳ ಹಿಂದೆ ಇದ್ದಾರೆ. ಆಧುನಿಕ ಕೃಷಿ ಪದ್ಧತಿಯಿಂದ ಇಳುವರಿ ಹೆಚ್ಚಿಸಲು ಸಾಧ್ಯ. ಕಾಫಿ ಬೆಳೆಗಾರರು ಆಂತರಿಕ ಮಾರುಕಟ್ಟೆಗೆ ಮತ್ತು ಉಪಯೋಗಕ್ಕೆ ಹೆಚ್ಚು ಆದ್ಯತೆ ನೀಡುವಂತಾಗಬೇಕು. ಕೃಷಿಕರು ಸಂಘಟಿತರಾಗುವುದೂ ಮುಖ್ಯ ಎಂದರು.
ದಿವ್ಯ ಸಾನಿಧ್ಯ ವಹಿಸಿದ ಮಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶ್ರೀಮಂತಿಕೆ ಎಂಬುದಕ್ಕೆ ಹಣಕಾಸಿನ ಸಂಗ್ರಹ ಮಾನದಂಡವಲ್ಲ. ಹೃದಯದ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ. ಜೀವನದ ಕ್ರಮ ಹಾಗೂ ಕಲ್ಪನೆ ಬದಲಾಗಬೇಕಾದುದು ಮುಖ್ಯ. ಆರ್ಥಿಕ ಸ್ವಾವಲಂಬನೆ ಪರಸ್ಪರ ಹಂಚುವಿಕೆಯಿAದ ಸಾಧ್ಯವಾಗಬೇಕು. ಕೃಷಿಯನ್ನು ಅವಲಂಬಿಸಿದವನು ಎಂದೂ ದರಿದ್ರನಾಗಿಲ್ಲ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಹೊಂಬೆಳಕಿನ ರೂವಾರಿ ಪಕ್ಷಿ ಶಾಸ್ತçಜ್ಞö ವೀರಾಜಪೇಟೆಯ ಡಾ. ಎಸ್.ವಿ. ನರಸಿಂಹನ್‌ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.