ಮಡಿಕೇರಿ, ಜ. ೧೨: ಮಾನವ ಕಲ್ಯಾಣಕ್ಕಾಗಿ ಅನೇಕ ಕಾರ್ಯಗಳನ್ನು ಕೈಗೊಳ್ಳುತ್ತಿರುವ, ‘ಲಜ್ಞಾ ಇಮಾಇಲ್ಲಾ' ಎಂಬ ಹೆಸರಿನಿಂದ ಕರೆಯಲ್ಪಡುವ ಅಹ್ಮದಿಯಾ ಮುಸ್ಲಿಮ್ ಸಂಘಟನೆಯ ಮಹಿಳಾ ಘಟಕಾ ಸ್ಥಾಪನೆಯಾಗಿ ೧೦೦ ವರ್ಷ ಪೂರ್ಣ ಗೊಂಡು ಶತಮಾನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸಣ್ಣ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಶನಿವಾರ ತಾ. ೭ ರಂದು ಸರಕಾರಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಆಯೋಜಿಸಲಾಗಿತ್ತು.

‘ಲಜ್ನಾ ಇಮಾಇಲ್ಲಾ' ಅಧ್ಯಕ್ಷೆ ರೂಮಾನ್ ರಿಜ್ವಾನ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಸರಕಾರಿ ಬೋಧಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.

೨೦೧೯ರಲ್ಲಿ ಕಾಟಿಕೇರಿಯಲ್ಲಿ ಆರಂಭವಾದ ಹರ್‌ಮಂದಿರ್ ಗುರುಕುಲ ಮಾದರಿ ಶಾಲೆಯಲ್ಲಿ ೧೨೦ ಮಕ್ಕಳು ೪ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತವಾಗಿ, ಅನುಭವದೊಂದಿಗಿನ ಕಲಿಕಾ ಮಾದರಿಯ ವಿದ್ಯಾಭ್ಯಾಸ, ವಸತಿ ಸೌಕರ್ಯ ನೀಡುತ್ತಾ ನಿಸ್ವಾರ್ಥ ಸೇವೆಗೈಯ್ಯುತ್ತಿರುವ ಈ ಮಾದರಿ ಶಾಲೆಗೆ ತಾವೇನಾದರು ಮಾಡಬೇಕೆಂಬ ಹಂಬಲದೊAದಿಗೆ ಅಹ್ಮದಿಯಾ ಜಮಾತಿನ ಈ ಮಹಿಳಾ ವಿಭಾಗದಿಂದ ಶಾಲೆಯ ಹಾಸ್ಟೆಲ್‌ನಲ್ಲಿ ಇರುವ ಮಕ್ಕಳಿಗೆ ಆರೋಗ್ಯ ತಪಾಸಣೆಯ ಶಿಬಿರವನ್ನು ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಅವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರೂಪೇಶ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಶಿಬಿರದ ನೇತೃತ್ವವನ್ನು ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ್ ವಹಿಸಿದ್ದರು. ೫ ವರ್ಷದಿಂದ ೧೦ ವರ್ಷದೊಳಗಿನ ೭೭ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಯಿತು. ಕಣ್ಣು, ಕಿವಿ, ಮೂಗು, ಚರ್ಮ, ದಂತ, ರಕ್ತ ಮುಂತಾದವುಗಳ ಸಂಪೂರ್ಣ ಪರೀಕ್ಷೆಯನ್ನು ಮಾಡಲಾಯಿತು. ತೊಂದರೆ ಇದ್ದ ಹಲವು ಮಕ್ಕಳಿಗೆ ಬೇಕಾದ ಔಷಧಿಗಳನ್ನು ವಿತರಿಸಲಾಯಿತು.

ಶಿಬಿರದಲ್ಲಿ ಡಾ. ಅಪರ್ಣ ದತ್, ಡಾ. ಸುನಿತ, ಡಾ. ಅಶ್ಚರ್ಯ ಆರ್. ಪಾಟಿಲ್, ಡಾ. ಐಶ್ವರ್ಯ ರಾಮಾನುಜನ್, ಡಾ ಗಿರೀಶ್ ಬಿ. ಎಸ್., ಡಾ. ಅಫ್ರೀನ್, ಡಾ. ಮೆಲ್ವಿನ್, ಡಾ. ರವಿಚಂದ್ರನ್, ಡಾ. ನಳಿನಿ, ಶುಶ್ರೂಷಕ ಅಧಿಕಾರಿಗಳಾದ ಹರಿಣಾಕ್ಷಿ ಡಿ.ಹೆಚ್., ನಳಿನಿ ಭಾಯಿ ಎ, ಭಾಗ್ಯಲಕ್ಷಿö್ಮ ಎನ್.ಬಿ. ಸೇರಿದಂತೆ ಹಲವು ವೈದ್ಯರು, ಶುಶ್ರೂಷ ಕಿಯರು, ಲ್ಯಾಬ್ ಟೆಕ್ನಿಶಿಯನ್, ಸಹಾಯಕರು, ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

ವೈದ್ಯಕೀಯ ಸಿಬ್ಬಂದಿಗಳೊAದಿಗೆ ಲಜ್ನಾ ಇಮಾಇಲ್ಲಾಹ್ ವಿಭಾಗದ ಸಮಿತಿ ಸದಸ್ಯರು, ಅಹ್ಮದಿಯಾ ಮುಸ್ಲಿಮ್ ಜಮಾತಿನ ಹಲವು ಸದಸ್ಯರು, ಹರ್‌ಮಂದಿರ್ ಶಾಲೆಯ ಪ್ರಾಂಶುಪಾಲ ರಾಘವೇಂದ್ರರವರು ಹಾಗೂ ಶಿಕ್ಷಕಿಯರು, ಆಸ್ಪತ್ರೆಯ ಅನೇಕ ಸಿಬ್ಬಂದಿಗಳು ಹಾಜರಿದ್ದರು.