ಮಡಿಕೇರಿ, ಜ. ೧೨: ಮಡಿಕೇರಿಯ ರಾಜೇಶ್ವರಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ವಿದ್ಯಾಸಂಸ್ಥೆಯಲ್ಲಿ ನಡೆಸಲಾಯಿತು. ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಮಡಿಕೇರಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಪ್ರಧಾನ ಸಂಚಾಲಕಿ ಧನಲಕ್ಷಿö್ಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬೈಲುಕೊಪ್ಪ ಟಿಬೆಟ್ ಕಾಲೋನಿಯ ಪ್ರಧಾನ ಗುರುಗಳಾದ ಕರ್ಮರಿಮ್ ಪೋಚೆ ಬೋದಿ ಸತ್ವಾಸ್ ಟ್ರಸ್ಟ್ ಕಗ್ಯುನಳಂದ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಹಾಗೂ ವಿದ್ಯಾಸಂಸ್ಥೆಯ ಅಧ್ಯಕ್ಷ ಗೋವಿಂದ ಸ್ವಾಮಿ ಅವರು ವಹಿಸಿದ್ದರು.
ಅತಿಥಿಗಳಾಗಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ದಾಕ್ಷಾಯಿಣಿ ವಾಸುದೇವ್, ಕಾರ್ಯದರ್ಶಿ ಸಚಿನ್ ವಾಸುದೇವ್, ನಿರ್ದೇಶಕ ಸತೀಲ್ ಹೆಚ್.ಎಸ್., ಆಡಳಿತ ಮಂಡಳಿ ಸದಸ್ಯರಾದ ಚುಮ್ಮಿ ದೇವಯ್ಯ, ಅನೀನ್ ಕೃಷ್ಣಾನೀ, ಕಿರಣ್ ಮತ್ತು ವಿದ್ಯಾಸಂಸ್ಥೆಯ ಪೋಷಕರಾದ ಡಾ. ರಾಜಗೋಪಾಲ್, ಕೊಡಗು ಪೊಲೀಸ್ ಅಧೀಕ್ಷಕ ಕಚೇರಿಯ ಉದ್ಯೋಗಿ ವೇದಕುಮಾರಿ, ಸಂಸ್ಥೆಯ ಪ್ರಾಂಶುಪಾಲೆ ಲಕ್ಷಿö್ಮÃ ಸಚ್ಚಿನ್ ಇವರುಗಳು ಪಾಲ್ಗೊಂಡಿದ್ದರು.
೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೯೮ ಅಂಕ ಗಳಿಸಿದ ವಿದ್ಯಾರ್ಥಿ ಮಹಮ್ಮದ್ ಶೀಕಾಜ್, ಪಿಯುಸಿ ಪರೀಕ್ಷೆಗಳಲ್ಲಿ ಶೇ. ೯೫ ಅಂಕ ಗಳಿಸಿದ ಧನುಷ್ ಎಂ.ಜಿ., ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಶ್ರೇಯಶ್, ಹೇಮಾವತಿ, ಹನೀಕಾ, ಸಾನೀಕ ರೈ, ಮಾನ್ಯ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಬಿಪಿನ್, ಗ್ರೀಷ್ಮ, ಮೋಜ್ಜಮ್ಮ್ ಇವರುಗಳನ್ನು ಸನ್ಮಾನಿಸಲಾಯಿತು.
ಮಡಿಕೇರಿ ವಿದ್ಯಾಸಂಸ್ಥೆ ಮತ್ತು ವಿದ್ಯಾಸಂಸ್ಥೆಯ ಮತ್ತೊಂದು ಶಾಖೆಯಾದ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ವಿದ್ಯಾಸಂಸ್ಥೆ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸಂಭ್ರಮ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಾರ್ಷಿಕ ವರದಿಯನ್ನು ಆಂಗ್ಲ ಮಾಧ್ಯಮ ಮುಖ್ಯೋಪಾಧ್ಯಾಯಿನಿ ದಿವ್ಯ ಆರೋರಾ ವಾಚಿಸಿದರು. ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ವೆಂಕಟೇಶ್ ಪೂಜಾರ್ ಮತ್ತು ಸಹಶಿಕ್ಷಕರಾದ ವಿನೋದ್ ಕುಮಾರ್ ವ್ಯಕ್ತಿ ಪರಿಚಯಿಸಿದರು. ಸಂಭ್ರಮ ಪ್ರಯುಕ್ತ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ವಿಭಾಗ ಮತ್ತು ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.