ಮಡಿಕೇರಿ, ಜ. ೧೧: ಕೇರಳದ ಉಳಿಕಲ್ಲ್ ತಾಲೂಕಿನ ಬೈತೂರಪ್ಪ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಉತ್ಸವ ಸಂದರ್ಭದಲ್ಲಿ ಕೇರಳದಿಂದ ಕಾಲ್ನಡಿಗೆಯಲ್ಲಿ ಆಗಮಿಸುವ ‘ಕೋರತಚ್ಚ’ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನಕ್ಕೆ ಆಗಮಿಸಿ ಹಬ್ಬದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಊರಿನವರು ಕೋರತಚ್ಚ ತಂಡವನ್ನು ಆತ್ಮೀಯತೆಯಿಂದ ಬರಮಾಡಿಕೊಂಡು ವಿಶೇಷ ಪೂಜೆ ನಡೆಯಿತು. ಕೇರಳದ ಉಳಿಕಲ್ಲ್ ತಾಲೂಕಿನ ವಯತೂರ್ ಎಂಬ ಜಾಗದಲ್ಲಿ ವರ್ಷಂಪ್ರತಿ ಹಬ್ಬ ನಡೆಯಲಿದ್ದು ಕೊಡಗಿನಲ್ಲಿ ಮೈಮೇಲೆ ಬರುವ ಬಹುತೇಕ ದೇವಾನುದೇವತೆಗಳು ಈ ಹಬ್ಬದಲ್ಲಿ ಭಾಗಿಯಾಗಿ ದರ್ಶನ ಪಡೆಯುತ್ತಾರೆ. ಇದರ ದೊಡ್ಡ ಹಬ್ಬ ಇದೇ ಜನವರಿ ೨೪ ಹಾಗೂ ೨೫ರಂದು ನಡೆಯುತ್ತದೆ. ೨೫ರಂದು ಕೊಡಗಿನ ದೇವರುಗಳ ದರ್ಶನ ಕಾಣಸಿಗುತ್ತದೆ.