ಮಡಿಕೇರಿ, ಜ. ೧೧: ಕೊಡಗು ನ್ಯಾಷನಲ್ ಇಂಟೆಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ನ (ನೀಮಾ) ಅಧ್ಯಕ್ಷರಾಗಿ ಡಾ. ಎ.ಆರ್. ರಾಜಾರಾಮ್, ಕಾರ್ಯದರ್ಶಿಯಾಗಿ ಡಾ. ಶ್ಯಾಮ್ ಪ್ರಸಾದ್ ಮತ್ತು ಕೋಶಾಧಿಕಾರಿಯಾಗಿ ಡಾ. ಪದ್ಮನಾಭ ಅವಿರೋಧವಾಗಿ ಆಯ್ಕೆಯಾದರು. ನಗರದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯಕಾರಿ ಮಂಡಳಿಯ ಪೋಷಕರಾಗಿ ಡಾ. ಸಿ.ಆರ್. ಉದಯಕುಮಾರ್ ಮತ್ತು ಡಾ. ಬಿ.ವಿ. ಶೆಣೈ, ಉಪಾಧ್ಯಕ್ಷರಾಗಿ ಡಾ. ಉದಯ ಕುಮಾರ್, ಡಾ. ಅರುಣಾ ಭಟ್, ಡಾ. ವಿವೇಕ್ರಾವ್, ಕಾರ್ಯದರ್ಶಿಗಳಾಗಿ ಡಾ. ಮುರಳಿ, ಡಾ. ಸುದೇಶ್ ಹೆಗ್ಡೆ, ತಾಲೂಕು ಪ್ರತಿನಿಧಿಗಳಾಗಿ ಡಾ. ರೋಷನ್ (ವೀರಾಜಪೇಟೆ), ಡಾ. ಪುರುಷೋತ್ತಮ್ (ಮಡಿಕೇರಿ), ಡಾ. ಮಹೇಶ್ (ಸೋಮವಾರಪೇಟೆ), ಡಾ. ರಾಜಾರಾಮ್ ಶೆಟ್ಟಿ (ಕುಶಾಲ ನಗರ) ಮತ್ತು ಡಾ ಸುಬ್ರಮಣ್ಯ ರಾವ್ (ಪೊನ್ನಂಪೇಟೆ), ಮಹಿಳಾ ಪ್ರತಿನಿಧಿಯಾಗಿ ಡಾ. ಶೈಲಜಾ ರಾಜೇಂದ್ರ ಆಯ್ಕೆಯಾದರು. ರಾಜ್ಯ ಕಾರ್ಯಕಾರಿ ಮಂಡಳಿಗೆ ಡಾ. ಪಿ.ಎನ್. ಕುಲಕರ್ಣಿ ಮತ್ತು ಡಾ. ಎನ್.ಕೆ. ರಾಜೇಂದ್ರ ಜಿಲ್ಲಾ ಪ್ರತಿನಿಧಿಗಳಾದರು.
ವಿವಿಧ ಯೋಜನೆಗಳ ಸಂಚಾಲಕರಾಗಿ ಆರೋಗ್ಯ ತಪಾಸಣಾ ಕಾರ್ಯಕ್ರಮಗಳಿಗೆ ಡಾ. ಸಂತೋಷ್ ಮತ್ತು ಡಾ. ಧನ್ಯ, ರಕ್ತದಾನ ಶಿಬಿರಗಳಿಗೆ ಡಾ. ಸಾವಿತ್ರಿ, ಡಾ. ಜ್ಯೋತಿ, ವನಸ್ಪತಿ ಉದ್ಯಾನ ಯೋಜನೆಗೆ ಡಾ. ಶ್ವೇತಾ, ಡಾ. ಮಮತಾ, ಕಾರ್ಯಕ್ರಮ ರೂಪುರೇಷೆಗಳಿಗೆ ಡಾ. ಸೌಮ್ಯ ಗಣರಾಜ್, ಡಾ. ಹೀನಾಕೌಸರ್, ಡಾ. ಅದಿತಿ ಭಟ್, ಡಾ. ನಿಧಿ, ನಿರಂತರ ವೈದ್ಯ ಶಿಕ್ಷಣಕ್ಕೆ ಡಾ. ಲಕ್ಷಿö್ಮÃಶ್, ಡಾ. ಈಶ್ವರಿ ಸಾರ್ವಜನಿಕ ಸಂಪರ್ಕಾ ಧಿಕಾರಿಯಾಗಿ ಡಾ. ಉದಯ ಶಂಕರ್ ಆಯ್ಕೆಯಾದರು.
ಪುತ್ತೂರಿನ ಸುಶ್ರುತ ಆಸ್ಪತ್ರೆಯ ಸರ್ಜನ್ ಡಾ. ರವಿಶಂಕರ್ ಪೆರ್ವಾಜೆ ಸಭೆಯಲ್ಲಿ ಪಾಲ್ಗೊಂಡು ನಿರಂತರ ವೈದ್ಯ ಶಿಕ್ಷಣದ ಅಂಗವಾಗಿ ಮೂಲವ್ಯಾದಿ, ಫಿಸ್ಟುಲ ಮೊದಲಾದ ಗುದ ಮಾರ್ಗದ ರೋಗಗಳ ಚಿಕಿತ್ಸಾ ವಿಧಾನಗಳನ್ನು ವಿವರಿಸಿ ರೋಗ ಪತ್ತೆಗೆ ಸೂಕ್ತ ಆಧುನಿಕ ಸಲಕರಣೆ ಗಳನ್ನು ಉಪಯೋಗಿಸುವಂತೆ ಕಿವಿಮಾತು ಹೇಳಿದರು. ಡಾ. ಸೌಮ್ಯ ಗಣರಾಜ್, ಡಾ. ಅದಿತಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಶೈಲಜಾ ರಾಜೇಂದ್ರ ಸ್ವಾಗತಿಸಿ, ಡಾ. ಮುರಳಿ ವಂದಿಸಿದರು.