ಮಡಿಕೇರಿ, ಜ. ೧೧ : ಸುಂಟಿಕೊಪ್ಪ ಬಳಿಯ ಸ್ವಸ್ಥ ವಿಶೇಷ ಶಾಲೆಯ ೧೦ ನೇ ವರ್ಷದ ವಾರ್ಷಿಕೋತ್ಸವ ತಾ. ೧೨ ರಂದು (ಇಂದು) ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಕಾರ್ಯಕ್ರಮ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಭಾಗವಹಿಸಲಿದ್ದಾರೆ. ಟಾಟಾ ಕಾಫಿ ಸಂಸ್ಥೆಯ ಎಂ.ಬಿ. ಗಣಪತಿ ಹಾಗೂ ರಾಜೀವ್ ಕೆ.ಜಿ., ಕೂರ್ಗ್ ಫೌಂಡೇಷನ್ ಟ್ರಸ್ಟಿಗಳಾದ ಎ.ಎಸ್. ಮುತ್ತಣ್ಣ ಹಾಗೂ ಗಂಗಾ ಚಂಗಪ್ಪ ಅವರುಗಳು ಪಾಲ್ಗೊಳ್ಳಲಿದ್ದಾರೆ.