ಸೋಮವಾರಪೇಟೆ, ಜ. ೧೧: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ತಾ. ೨೮ ರಂದು ಹೊನ್ನಮ್ಮನಕೆರೆ ದಡದಲ್ಲಿ ನಡೆಯಲಿರುವ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಪ್ರತಿದಿನ ಸಂಜೆ ೫.೩೦ ರಿಂದ ೬.೩೦ ರವರೆಗೆ ಸೂರ್ಯ ನಮಸ್ಕಾರ ಅಭ್ಯಾಸ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.

ರಥಸಪ್ತಮಿ ಅಂಗವಾಗಿ ಅಂದು ಬೆಳಿಗ್ಗೆ ೬ ಗಂಟೆಯಿAದ ಹೊನ್ನಮ್ಮನ ಕೆರೆ ದಡದಲ್ಲಿ ೧೦೮ ಸೂರ್ಯ ನಮಸ್ಕಾರ ನಡೆಯಲಿದ್ದು, ಈಗಿನಿಂದಲೇ ಅಭ್ಯಾಸ ಮಾಡುವ ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. ೯೯೪೫೯೮೭೭೧೭ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.