ಮಡಿಕೇರಿ, ಜ. ೧೦: ಚೆಟ್ಟಳ್ಳಿಯ ಬಟ್ಟೀರ ಕುಟುಂಬಸ್ಥರ ಆಶ್ರಯದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿದ್ದು, ತಾ. ೨೯ ರಂದು ನಡೆಯಲಿದೆ ಎಂದು ಬಟ್ಟೀರ ಎಸ್. ಕಾಳಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಸ್ಪರ್ಧೆ ನಡೆಯಲಿದ್ದು, ಮುಕ್ತವಾಗಿ ಎಲ್ಲರೂ ಭಾಗವಹಿಸಬಹುದಾಗಿದೆ. ಅಂದು ಬೆಳಿಗ್ಗೆ ೯.೩೦ಗಂಟೆಗೆ ಕೋವಿ ಪೂಜೆಯೊಂದಿಗೆ ಆರಂಭವಾಗಲಿದ್ದು, .೨೨(೫೦ಮೀ.) ೧೨ಬೋರ್(೩೦ಮೀ.) ಹಾಗೂ ಏರ್ ರೈಫಲ್(೧೫ಮೀ.) ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ ಮೊದಲ ಮೂರು ನಗದು ಹಾಗೂ ಪಾರಿತೋಷಕ ಬಹುಮಾನ ನೀಡಲಾಗುವದು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಬಟ್ಟೀರ ಕರಣ್ ಮುತ್ತಣ್ಣ(೯೪೮೦೪೩೮೦೦೧), ಬಟ್ಟೀರ ಬೋಜಣ್ಣ(೬೩೬೧೭೪೩೭೯೭) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬಟ್ಟೀರ ಕರಣ್ ಮುತ್ತಣ್ಣ, ಬೋಜಣ್ಣ, ವೇಣುಗೋಪಾಲ, ಗೀತಾ ಕುಶಾಲಪ್ಪ, ಪದ್ಮಾ ಕಾಳಪ್ಪ ಇದ್ದರು.