ಕುಶಾಲನಗರ, ಜ. ೧೦: ಕುಶಾಲನಗರ ತಾಲೂಕು ಮುಳ್ಳುಸೋಗೆ ಗ್ರಾಮದಲ್ಲಿ ಚೀಟಿ ನಡೆಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದ ಆರೋಪಿಗಳಾದ ಒಂದೇ ಕುಟುಂಬದ ಮೂರು ಮಂದಿಯನ್ನು ಬಂಧಿಸಲಾಗಿದೆ.

ಮುಳ್ಳುಸೋಗೆ ಗ್ರಾಮದ ನಿವಾಸಿ ಜಯಲಕ್ಷಿö್ಮ ಕಳೆದ ಎರಡು - ಮೂರು ವರ್ಷಗಳಿಂದ ಚೀಟಿ ನಡೆಸಿ ಸುಮಾರು ೨೦ ರಿಂದ ೨೫ ಮಂದಿಗೆ ವಂಚನೆ ಮಾಡಿರುವ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಒಳಗಾದ ವ್ಯಕ್ತಿಗಳಿಂದ ದೂರು ದಾಖಲಾಗಿತ್ತು.

ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸ್ ಉಪ ಅಧೀಕ್ಷಕ ಗಂಗಾಧರಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಸುಮಾರು ರೂ. ೫೦ ಲಕ್ಷಕ್ಕೂ ಅಧಿಕ ಮೊತ್ತದ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬAಧಿಸಿದAತೆ ವಂಚನೆ ಮಾಡಿರುವ ಮಹಿಳೆ ಜಯಲಕ್ಷಿö್ಮ, ಆಕೆಯ ಪತಿ ಚಂದ್ರ ಮತ್ತು ಪುತ್ರ ರವಿ ಎಂಬವರನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಬಗ್ಗೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ಅಪ್ಪಾಜಿ ಮತ್ತು ಸಿಬ್ಬಂದಿಗಳು ವಂಚನೆ ಪ್ರಕರಣದ ಬಗ್ಗೆ ಸುದೀರ್ಘ ತನಿಖೆ ಕೈಗೊಂಡಿದ್ದರು.