ಶ್ರೀಮಂಗಲ ಕಾಯಮಾನಿ ನಿವಾಸಿ, ಬೊಜ್ಜಂಗಡ ಶೈಲಾ ಸುಬ್ರಮಣಿ (೫೩) ಅವರು ತಾ. ೧೦ ರಂದು ನಿಧನರಾದರು. ಮೃತರು ಪತಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಶೈಲಾ ಅವರು ಪ್ರಸ್ತುತ ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷೆ ಹಾಗೂ ಈ ಹಿಂದೆ ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷರಾಗಿದ್ದರು.
*ಸುಂಟಿಕೊಪ್ಪದ ಹೊಸ ಬಡಾವಣೆಯ ನಿವಾಸಿ ಅಮೆ ಮನೆ ಗಣೇಶ (೭೫) ಅವರು ತಾ. ೧೦ ರಂದು ನಿಧನರಾದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೧ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಚಿಟ್ಟಿಮನೆಯ ಐನ್ ಮನೆಯಲ್ಲಿ ನಡೆಯಲಿದೆ.
*ಮೂಲತಃ ಕೊಡಗು ಜಿಲ್ಲೆಯ ಪ್ರಸ್ತುತ ಬೆಂಗಳೂರಿನ ವಿದ್ಯಾರಣ್ಯಪುರ ದಲ್ಲಿ ನೆಲೆಸಿದ್ದ ಕರ್ಣಯ್ಯನ ಅಪ್ಪಣ್ಣ ರಾಜು (ಕೃಷ್ಣಪ್ಪ - ೮೧) ತಾ.೯ ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ನಾಪೋಕು, ಕೊಳಕೇರಿ ನಿವಾಸಿ ದಿ. ಚೋಯಿ ಅವರ ಪತ್ನಿ ಟಿ.ಸಿ. ಜಾನಕಿ (೭೫) ತಾ. ೯ರಂದು ನಿಧನರಾದರು. ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
*ಇಬ್ನಿವಳವಾಡಿ ಗ್ರಾಮ, ನೀರುಕೊಲ್ಲಿ ನಿವಾಸಿ ಹೆಚ್.ಬಿ. ಗಂಗೆ (೮೫) ತಾ. ೧೦ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧೧ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಓರ್ವ ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.