ಸಿದ್ದಾಪುರ, ಜ. ೯: ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆಟೋ ಚಾಲಕನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಕೊಂಡAಗೇರಿ ಗ್ರಾಮದ ಆಟೋರಿಕ್ಷಾ ಚಾಲಕ ಪಿ.ಹೆಚ್ ಜಕ್ರಿಯಾ ಎಂಬಾತ ಆಟೋರಿಕ್ಷಾ (ಕೆಎ-೧೨-ಎ ೫೨೩೮)ದಲ್ಲಿ ಅಕ್ರಮವಾಗಿ ಗೋಮಾಂಸವನ್ನು ಕೊಂಡAಗೇರಿ ಗ್ರಾಮಕ್ಕೆ ತರುತಿದ್ದಾಗ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಪೊಲೀಸರು ದಾಳಿ ನಡೆಸಿ ಮಾಂಸದೊAದಿಗೆ ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಅಲ್ಲದೇ ಆರೋಪಿ ಜಕ್ರಿಯಾನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.