(ಅಣ್ಣೀರ ಹರೀಶ್ ಮಾದಪ್ಪ)

ಶ್ರೀಮಂಗಲ, ಜ. ೮: ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ಹುದಿಕೇರಿಯ ಅಂಜಿಗೇರಿ ನಾಡ್ ಕೂಟ ವತಿಯಿಂದ ಆಯೋಜಿಸಿದ ‘ಕ್ರಾಸ್ ಕಂಟ್ರಿ’ ೫ ಕಿ.ಮೀ. ರಾಜ್ಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಪುಟಾಣಿಗಳು, ಬಾಲ-ಬಾಲೆಯರು, ಯುವಕ-ಯುವತಿಯರು ಮತ್ತು ಹಿರಿಯರು ಸೇರಿ ಸುಮಾರು ೩೨೩ ಸ್ಪರ್ಧಾರ್ಥಿಗಳು ಭಾಗವಹಿಸಿ ಗಮನ ಸೆಳೆದರು. ಗ್ರಾಮೀಣ ಭಾಗದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಸ್ಪರ್ಧಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಸ್ಪರ್ಧೆಯನ್ನು ಹುದಿಕೇರಿಯ ಪ್ರೌಢಶಾಲಾ ಮೈದಾನದಿಂದ ೫ ಕಿ.ಮೀ.ವರೆಗೆ ಗ್ರಾಮೀಣ ರಸ್ತೆಯಲ್ಲಿ ಆಯೋಜಿಸಲಾಗಿತ್ತು. ೧೫ ರಿಂದ ೪೦ ವರ್ಷ ವಯೋಮಿತಿವರೆಗಿನ ಸ್ಪರ್ಧೆಯನ್ನು ಕೋವಿಯಲ್ಲಿ ಗುಂಡು ಹಾರಿಸುವ ಮೂಲಕ ಅಂತರರಾಷ್ಟಿçÃಯ ಓಟಗಾರ ಪಾಲೇಕಂಡ ಪಿ.ಬೆಳ್ಯಪ್ಪ ಉದ್ಘಾಟಿಸಿದರು. ೧೪ ವರ್ಷ ಒಳಗಿನವರ ಸ್ಪರ್ಧೆಯನ್ನು ಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೆಕ್ಕೇರ ಚಂದ್ರಪ್ರಕಾಶ್ ಉದ್ಘಾಟಿಸಿ ದರು. ೪೦ ವರ್ಷ ಮೇಲ್ಪಟ್ಟವರ ಸ್ಪರ್ಧೆಯನ್ನು ಅಂಜಿಕೇರಿ ನಾಡ್ ಕೂಟದ ಸ್ಥಾಪಕ ಅಧ್ಯಕ್ಷ ಅಜ್ಜಿಕುಟ್ಟಿರ ಪ್ರಖ್ಯಾತ್ ಪೂಣಚ್ಚ ಉದ್ಘಾಟಿಸಿದರು. ಬೆಳಿಗ್ಗೆ ೭.೨೦ ಗಂಟೆಗೆ ಆರಂಭವಾದ ಸ್ಪರ್ಧೆಯಲ್ಲಿ ೫ ಕಿ.ಮೀ. ಯನ್ನು ಸುಮಾರು ೪೦ ರಿಂದ ೬೦ ನಿಮಿಷ ಅವಧಿಯಲ್ಲಿ ಕ್ರಮಿಸಿದರು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನೆರೆ ರಾಜ್ಯದಿಂದಲೂ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ಆಯೋಜಿಸಿದ್ದ ಸ್ಪರ್ಧೆಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದೆ ಎಂದು ಅಂಜಿಕೇರಿನಾಡ್ ಕೂಟದ ಅಧ್ಯಕ್ಷ ಚಂಗುಲAಡ ಅಯ್ಯಪ್ಪ ಹಾಗೂ ಕಾರ್ಯದರ್ಶಿ ಬಯವಂಡ ಪೂವಣ್ಣ ಹರ್ಷ ವ್ಯಕ್ತಪಡಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕಿ ಹಾಗೂ ದಾನಿ ಕೈಬುಲೀರ ಪಾರ್ವತಿ ಅಪ್ಪಯ್ಯ ಅವರು ಗ್ರಾಮೀಣ ಭಾಗದಲ್ಲಿ ಅಂಜಿಕೇರಿ ನಾಡ್ ಕೂಟ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದೆ. ಪ್ರತಿಯೊಬ್ಬರು ತಮ್ಮ ಗ್ರಾಮ ನಾಡುಗಳಿಗೆ ನಮ್ಮಿಂದಾಗುವ ಕೊಡುಗೆಯನ್ನು ನೀಡಬೇಕು, ಮ್ಯಾರಥಾನ್ ಹಿರಿಯರು- ಕಿರಿಯರು ಮತ್ತು ಪುಟಾಣಿಗಳು ಒಂದೇ ಕಡೆ ಸೇರಲು ಅವಕಾಶ ಕಲ್ಪಿಸಿದೆ. ಇಂತಹ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು. ಇಂತಹ ಕಾರ್ಯಕ್ರಮ ಆಗಾಗ್ಗೆ ಆಯೋಜನೆ ಮಾಡುವುದರಿಂದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ. ಶಾರೀರಿಕ ಮಾನಸಿಕವಾಗಿ ಆರೋಗ್ಯ ಹಾಗೂ ದೃಢತೆಗೆ ಸಹಕಾರಿಯಾಗಲಿದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಅಂತರರಾಷ್ಟಿçÃಯ ಓಟಗಾರ ಪಾಲೇಕಂಡ ಪಿ.ಬೆಳ್ಯಪ್ಪ ಅವರು ಮಾತನಾಡಿ ಶಾಲೆಯಿಂದ ಕಾಲೇಜಿಗೆ ಮಕ್ಕಳು ಸೇರುವ ಸಮಯದಲ್ಲಿ ಮಕ್ಕಳು ದಾರಿ ತಪ್ಪದಂತೆ ಪೋಷಕರು ನಿಗಾ ವಹಿಸಬೇಕು. ಕಾಲೇಜುಗಳಿಗೆ ಪ್ರತಿ ತಿಂಗಳು ಭೇಟಿ ನೀಡಿ ಪ್ರಗತಿಯ ಬಗ್ಗೆ ವಿಚಾರಿಸಬೇಕು. ಸಣ್ಣ ವಯಸ್ಸಿನಲ್ಲಿ ಮ್ಯಾರಥಾನ್ ಸೇರಿದಂತೆ ಕ್ರೀಡಾ ಹವ್ಯಾಸವನ್ನು

(ಮೊದಲ ಪುಟದಿಂದ) ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಕೊಡಗು ಮಾಸ್ಟರ್ ಅಥ್ಲೆಟಿಕ್ಸ್ ಸಂಘದ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್, ಅಂಜಿಗೇರಿ ನಾಡ್ ಕೂಟದ ಅಧ್ಯಕ್ಷ ಚಂಗುಲAಡ ಅಯ್ಯಪ್ಪ, ಕಾರ್ಯದರ್ಶಿ ಬಯವಂಡ ಪೂವಣ್ಣ ಹಾಜರಿದ್ದರು. ನೂರೇರ ಜೀವನ್ ಅಯ್ಯಪ್ಪ ಪ್ರಾರ್ಥಿಸಿದರು. ನೆರ್ಪಂಡ ಹರ್ಷ ನಿರೂಪಿಸಿದರು.

ಗಮನ ಪುಟಾಣಿ: ಮ್ಯಾರಥಾನ್‌ನಲ್ಲಿ ಅತ್ಯಂಡ ಕಿರಿಯ ಸ್ಪರ್ಧಿಯಾಗಿ ಮೂರೂವರೆ ವರ್ಷದ ತೀತಿರ ವಿಹಾನ್ ಚಿಣ್ಣಪ್ಪ ತಾಯಿಯೊಂದಿಗೆ ಓಡುವ ಮೂಲಕ ಎಲ್ಲರ ಗಮನ ಸೆಳೆದರು. ಮಧ್ಯದಲ್ಲಿ ನಿರ್ಗಮಿಸದೇ ೫ ಕಿ.ಮೀ. ಗುರಿ ಪೂರ್ಣಗೊಳಿಸಿದ್ದು ಎಲ್ಲರ ಮೆಚ್ಚುಗೆ ಪಡೆಯಿತು.

ಚೆಕ್ಕೇರ ರೋನಕ್ ತಮ್ಮಯ್ಯ ಎಂಬ ೬ ವರ್ಷದ ಬಾಲಕ ಆರಂಭದ ಸ್ವಲ್ಪ ದೂರದಲ್ಲಿಯೇ ಒಂದು ಕಾಲಿನಿಂದ ಶೂ ಕಳಚಿ ಹೋದರೂ, ದೃತಿಗೆಡದೇ ಒಂದು ಕಾಲಿನಲ್ಲಿ ಶೂ, ಇನ್ನೊಂದು ಕಾಲಿನಲ್ಲಿ ಬರಿಗಾಲಿನಲ್ಲಿಯೇ ಓಡಿ ೫ ಕಿ.ಮೀ. ಗುರಿ ಮುಟ್ಟಿದರು. ೮೨ ವರ್ಷದ ಅಂತರರಾಷ್ಟಿçÃಯ ಓಟಗಾರ ಪಾಲೇಕಂಡ ಪಿ.ಬೆಳ್ಯಪ್ಪ ಸ್ಪರ್ಧೆಯ ಅತ್ಯಂತ ಹಿರಿಯರಾಗಿ ಪಾಲ್ಗೊಂಡು ಗುರಿಮುಟ್ಟಿದರು.

ಫಲಿತಾಂಶ: ೧೪ ವರ್ಷ ಒಳಗಿನ ವಿಭಾಗ ಬಾಲಕರು: ೧.ನಿಶಾಂತ್.ಯA., ೨.ಚೆರಿಯಂಡ ತಾನಿಷ್ ತಮ್ಮಯ್ಯ,೩. ನೆಲ್ಲೀರ ಆರ್ಯ ಅಯ್ಯಪ್ಪ, ೪.ನಂಬುಡುಮಾಡ ಬೋಪಯ್ಯ, ೫.ಮಾಚಂಗಡ ದೇವಯ್ಯ, ೬. ಚೊಟ್ಟಂಗಡ ದೇವಯ್ಯ.. ೧೪ ವರ್ಷ ಒಳಗಿನ ಬಾಲಕಿಯರ ವಿಭಾಗ: ೧.ಮಾನಸಿ.ಬಿ.ಯು., ೨.ಕೀತಿಯಂಡ ಪೂರ್ವಿ ಪೊನ್ನಮ್ಮ, ೩. ನಂಬುಡುಮಾಡ ಪೊನ್ನಮ್ಮ, ೪. ಮುಂಡುಮಾಡ ಹರ್ಷಿಕಾ ರಾಕೇಶ್, ೫. ಪ್ರಕೃತಿ, ೬. ನಿರೀಕ್ಷಾ ಪೊನ್ನಜ್ಜಿರ

೧೫-೪೦ ವಯೋಮಿತಿ ಯುವಕರ ವಿಭಾಗ: ೧.ಶ್ರೀಧರ್ ಎಸ್.ಎನ್., ೨.ಅಪ್ಪಚ್ಚಂಗಡ ಸಿಬಿನ್ ಚಂಗಪ್ಪ, ೩. ಅಜ್ಜಮಾಡ ಶಿವನ್ ಪೂವಣ್ಣ, ೪. ಬಡುವಮಂಡ ಗಣಪತಿ, ೫. ಗೌತಮ್‌ಎಸ್, ೬. ಚಿಮ್ಮಣಮಾಡ ಸಚಿನ್ ಆಯ್ಯಪ್ಪ.

೧೫-೪೦ ವಯೋಮಿತಿ ಯುವತಿಯರ ವಿಭಾಗ: ೧.ನಾಳಿಯಮ್ಮಂಡ ಯಗ್ನ ಪ್ರಶಾಂತ್, ೨.ಕಾಳಚಂಡ ಚೋಂದಮ್ಮ ತಮ್ಮಯ್ಯ, ೩. ಶ್ರೀ ಕೆ.ಎಲ್, ೪. ಉದ್ದಿನಾಡಂಡ ಅರ್ಚನಾ ನಾಣಿಯಪ್ಪ,೫. ಚೆಪ್ಪುಡೀರ ಮೋನಿಷಾ ಪೊನ್ನಮ್ಮ, ೬.ಮಾಲೇಟಿರ ದಿಶಾ ಪೊನ್ನಮ್ಮ ೪೦ ಮೇಲ್ಪಟ್ಟ ವಯೋಮಿತಿ ಪುರುಷರ ವಿಭಾಗ: ೧. ಹೊಸೊಕ್ಲು ಎ. ಚಿಣ್ಣಪ್ಪ, ೨. ಗಣೇಶ್. ಟಿ.ಎ, ೩. ಕಿರಿಯಮಾಡ ದಿಲನ್ ಮಂದಣ್ಣ, ೪. ಬೊಪ್ಪಂಡ ಪೊನ್ನಪ್ಪ, ೫. ಯಾರಕುಟ್ಟಂಡ ವಿನೋದ್, ೬. ಸುರೇಶ್ ಪಿ.ಟಿ.

೪೦ ಮೇಲ್ಪಟ್ಟ ವಯೋಮಿತಿ ಮಹಿಳೆಯರ ವಿಭಾಗ: ೧.ಬೊಪ್ಪಂಡ ಕುಸುಮ್ ಭೀಮಯ್ಯ, ೨.ಬೀನಾ ಫರ್ನಾಂಡಿಸ್, ೩. ಚಂಗುಲAಡ ಅಕ್ಕಮ್ಮ, ೪. ಮೂಕಳೇರ ಮೀರಾ ಅಶೋಕ್, ೫. ವೆಂಕಟಲಕ್ಷö್ಮಮ್ಮ, ೬. ಪುತ್ತಮನೆ ಅನಿತಾ ಜೀವನ್ ಪ್ರತಿ ವಿಭಾಗದಲ್ಲಿ ಪ್ರಥಮ ೬ ಸ್ಥಾನಗಳಿಗೆ ಅನುಕ್ರಮವಾಗಿ ೫ ಸಾವಿರ, ೪ ಸಾವಿರ, ೩ ಸಾವಿರ ಮತ್ತು ೪, ೫ ಮತ್ತು ೬ ಸ್ಥಾನಕ್ಕೆ ತಲಾ ೧ ಸಾವಿರ ನಗದು ಟ್ರೋಫಿ ,ಪ್ರಶಸ್ತಿ ಪತ್ರ ಪಡೆದುಕೊಂಡರು.