ಮಡಿಕೇರಿ, ಜ. ೮: ಮ್ಯಾನ್ಸ್ ಕಾಂಪೌAಡ್ ಕ್ಲಬ್ (ಎಂಸಿಸಿ) ವತಿಯಿಂದ ಮ್ಯಾನ್ಸ್ ಕಾಂಪೌAಡ್ ಬಳಿಯ ಫುಟ್ಬಾಲ್ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಭಗವತಿ (ಎ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಭಗವತಿ (ಬಿ) ತಂಡ ರನ್ನರ್ಸ್ ಸ್ಥಾನ ಪಡೆದುಕೊಂಡಿತು. ಪೆನಾಲ್ಟಿ ಶೂಟೌಟ್ನಲ್ಲಿ ಭಗವತಿ (ಎ) ತಂಡ ಭಗವತಿ (ಬಿ) ವಿರುದ್ಧ ೩-೨ ಗೋಲುಗಳ ಅಂತರದಿAದ ಅಂತಿಮ ಪಂದ್ಯದಲ್ಲಿ ಜಯಸಾಧಿಸಿತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಗವತಿ (ಬಿ) ತಂಡ
(ಮೊದಲ ಪುಟದಿಂದ) ಸುಪ್ರಿಂ ವಿರುದ್ಧ ೪-೧ ಗೋಲುಗಳ ಗೆಲುವು ಸಾಧಿಸಿತು. ಸೆಮಿಫೈನಲ್ನಲ್ಲಿ ಭಗವತಿ (ಎ) ಅಂಬೇಡ್ಕರ್ ಎಫ್ಸಿ ವಿರುದ್ಧ ೪-೧ ಗೋಲುಗಳಿಂದ ಜಯಗಳಿಸಿತು. ಭಗವತಿ (ಬಿ) ತಂಡ ಎಂಸಿಸಿ ವಿರುದ್ಧ ೪-೧ ಗೋಲುಗಳ ಜಯ ದಾಖಲಿಸಿತು. ಸೌಹಾರ್ದ ಪಂದ್ಯದಲ್ಲಿ ಪ್ರೆಸ್ ತಂಡ ಪೊಲೀಸ್ ತಂಡದ ವಿರುದ್ಧ ೨-೦ ಗೋಲುಗಳ ಗೆಲುವು ಸಾಧಿಸಿತು. ಎಂಸಿಸಿ ಲೆಜೆಂಡ್ಸ್ ಹಾಗೂ ಪ್ರೆಸ್ ತಂಡದ ನಡುವಿನ ಪಂದ್ಯದಲ್ಲಿ ೨-೨ ಸಮಗೋಲುಗಳಾದ್ದರಿಂದ ಪೆನಾಲ್ಟಿ ಶೂಟೌಟ್ನಲ್ಲಿ ಎಂಸಿಸಿ ಲೆಜೆಂಡ್ಸ್ ಪ್ರೆಸ್ ತಂಡದ ವಿರುದ್ಧ ೫-೪ ಗೋಲುಗಳ ಗೆಲುವು ದಾಖಲಿಸಿತು.
ಉತ್ತಮ ಆಟಗಾರನಾಗಿ ಭಗವತಿ (ಎ) ತಂಡದ ಉನೈಸ್, ಟಾಪ್ ಸ್ಕೋರರ್ ಆಗಿ ಭಗವತಿ (ಎ) ತಂಡದ ಶರತ್ (ಕಣ್ಣ) ಗೋಲು ಉದಯೋನ್ಮುಖ ಆಟಗಾರನಾಗಿ ಭಗವತಿ (ಬಿ) ತಂಡದ ಗೋಲ್ಕೀಪರ್ ಸಿಜು, ಉತ್ತಮ ಗೋಲ್ಕೀಪರ್ ಆಗಿ ಎಂಸಿಸಿ (ಬಿ) ತಂಡದ ಸಿದ್ಧಾಥ್ ð, ಉತ್ತಮ ತಂಡವಾಗಿ ಎಂಸಿಸಿ (ಬಿ) ಹೊರಹೊಮ್ಮಿತು. ತೀರ್ಪುಗಾರರಾಗಿ ಇಸ್ಮಾಯಿಲ್ ಕಂಡಕರೆ ಕಾರ್ಯನಿರ್ವಹಿಸಿದರೆ, ಎಂಸಿಸಿ ತಂಡದ ಅಶೋಕ ವೀಕ್ಷಕ ವಿವರಣೆ ನೀಡಿದರು.