ಮಡಿಕೇರಿ, ಜ. ೮: ಕೊಡಗು ಜಿಲ್ಲೆಯಲ್ಲಿ ಬಾಣೆ ಜಮೀನುಗಳಿಗೆ ಹಾಗೂ ಇತರ ಜಮೀನುಗಳಿಗೆ ಸಂಬAಧಿಸಿದAತೆ ಸಮಸ್ಯೆಗಳು ಉದ್ಭವಿಸುತ್ತಲೇ ಬಂದಿದೆ. ಇದೀಗ ಇದರಲ್ಲಿ ಕಂದಾಯ ನಿಗದಿ ಕೂಡ ಒಂದು ಪ್ರಮುಖ ಸಮಸ್ಯೆಯಾಗಿದ್ದು, ಜನತೆಯ ಪರದಾಟ ಮುಂದು ವರಿದಿದೆಯೇ ಹೊರತು ಇದಕ್ಕೆ ಪರಿಹಾರ ಮಾತ್ರ ಅಂತಿಮವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ - ಸರಕಾರ ಸೂಕ್ತ ಗಮನಹರಿಸಿ ಇದಕ್ಕೆ ಮುಕ್ತಿ ಒದಗಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಜನಸಾಮಾನ್ಯರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿರುವ ಹಾಗೂ ಉಚಿತವಾಗಿ ಸೇವೆ - ಸಲಹೆಗಳನ್ನು ನೀಡುತ್ತಿರುವ ಮಡಿಕೇರಿಯಲ್ಲಿನ ಕೊಡಗು ಸೇವಾ ಕೇಂದ್ರದ ಪ್ರಮುಖರು ಕೆಲವು ಸಲಹೆಗಳ ಮೂಲಕ ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ೨೦೧೧ರಲ್ಲಿ ಜಮ್ಮಾ ವಿಧೇಯಕಕ್ಕೆ ತಿದ್ದುಪಡಿಯಾಗಿ ಈ ಕುರಿತಾಗಿ ಇದ್ದ ಗೊಂದಲಗಳನ್ನು ಸರಕಾರ ಸರಿಪಡಿಸಿದೆ. ಇದರಲ್ಲಿ ಜನಪ್ರತಿನಿಧಿಗಳ ಪ್ರಯತ್ನವೂ ಸ್ವಾಗತಾರ್ಹವಾಗಿದೆ. ಆದರೆ, ನಂತರದಲ್ಲಿ ಸರಕಾರದ ಕೆಲವು ತೀರ್ಮಾನ- ಸೂಚನೆಗಳು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಜಿಲ್ಲಾಡಳಿತದಿಂದಲೂ ಈ ವಿಚಾರ ದಲ್ಲಿ ಸಾಕಷ್ಟು ಪರಿಣಾಮಕಾರಿಯಾದ ಕೆಲಸಗಳನ್ನು ನಿರ್ವಹಿಸಬೇಕಾಗಿದೆ ಎಂದು ಸೇವಾ ಕೇಂದ್ರದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ಜಮ್ಮಾಬಾಣೆ ಜಾಗದ ಒಡೆತನದ ವಿಚಾರವನ್ನು ಸರಕಾರ ಸ್ಪಷ್ಟಪಡಿಸಿ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ. ಆದರೆ ಇನ್ನೂ ಕಂದಾಯಕ್ಕೆ ಒಳಪಡದ ಜಾಗದ ಕುರಿತಾಗಿ ಸಾರ್ವಜನಿಕರ ಸಮಸ್ಯೆಗಳು ಮುಂದುವರಿಯುತ್ತಲೇ ಇದೆ. ಈ ನಿಟ್ಟಿನಲ್ಲಿ ಸರಕಾರದ ಮೂಲಕವೇ ಇಂತಹ ಜಾಗಗಳಿಗೆ ಕಂದಾಯ ನಿಗದಿಪಡಿಸುವ ವ್ಯವಸ್ಥೆಯಾಗಬೇಕಿದೆ ಎಂದು ಸೇವಾ ಕೇಂದ್ರದ ತೇಲಪಂಡ ಪ್ರದೀಪ್ ಪೂವಯ್ಯ, ತಮ್ಮು ಪೂವಯ್ಯ ಅವರುಗಳು ಆಗ್ರಹಿಸಿದ್ದಾರೆ. ಜಾಗದ ಗೊಂದಲ ಬಗೆಹರಿದಿರುವುದರಿಂದ ಕಂದಾಯ ನಿಗದಿ ವಿಚಾರವೂ ಸರಕಾರದಿಂದಲೇ ಆದಲ್ಲಿ ಜನರು ಪರದಾಡುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸರಕಾರದ ಮೂಲಕವೇ ವಿಶೇಷ ಆಂದೋಲನ ನಡೆಸಿ ಕಂದಾಯ ನಿಗದಿ ಮಾಡಬೇಕೆಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ. ಜಮ್ಮಾ ಸೇರಿದಂತೆ ಸಾಗು ಜಾಗಕ್ಕೆ ಸಂಬAಧಿಸಿದAತೆಯೂ ಈ ಸಮಸ್ಯೆ ಇದ್ದು, ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ.
ಕಂದಾಯ ನಿಗದಿಗೆ ಕೋರಿ ಸಲ್ಲಿಸಲ್ಪಟ್ಟಿರುವ ಹಲವಾರು ಕಡತಗಳು ಇನ್ನೂ ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತದ ಹಳೆಯ ಕಡತಗಳನ್ನು ತಕ್ಷಣ ವಿಲೇವಾರಿ ಮಾಡಬೇಕಾಗಿದೆ. ಇದು ಪ್ರಸ್ತುತ ಸಕಾಲದ ವ್ಯಾಪ್ತಿಯಲ್ಲಿ ಇಲ್ಲದಿರುವುದರಿಂದ ಜನತೆಗೆ ತಮ್ಮ ಕಡತಗಳ ‘ಸೀನಿಯಾರಿಟಿ (ಆದ್ಯತೆ) ತಿಳಿದುಬರುತ್ತಿಲ್ಲ. ಇದರಿಂದ ಕಂದಾಯ ನಿಗದಿಯ ಕಡತಗಳ ವಿಚಾರವನ್ನು ಸಕಾಲದ ವ್ಯಾಪ್ತಿಗೆ ತರಬೇಕಿದೆ ಎಂದೂ ಅವರುಗಳು ಒತ್ತಾಯಿಸಿದ್ದಾರೆ. ಆನ್ಲೈನ್ ಮೂಲಕ ಸರಕಾರದಿಂದ ನೇರವಾಗಿ ಕಂದಾಯ ನಿಗದಿ ಕ್ರಮ ಅನುಸರಿಸಿದಲ್ಲಿ ಈ ಸಮಸ್ಯೆ ಸಾಕಷ್ಟು ಇತ್ಯರ್ಥವಾಗಲಿದೆ. ಈ ವಿಚಾರದಲ್ಲಿ ಸೇವಾ ಕೇಂದ್ರ ದಿಂದಲೂ ಜನತೆಗೆ ಉಚಿತ ಸೇವೆ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಂದಾಯ ನಿಗದಿ ವಿಚಾರದಲ್ಲಿ
(ಮೊದಲ ಪುಟದಿಂದ) ಈ ಹಿಂದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ೨೦೨೨ರ ಏಪ್ರಿಲ್ನಲ್ಲಿ ನಡೆಸಲಾಗಿದ್ದ ವಿಶೇಷ ಸಭೆಯಲ್ಲಿ ಇದಕ್ಕಾಗಿ ರಚಿಸಲಾಗಿದ್ದ ಸಮಿತಿಯ ತೀರ್ಮಾನದಂತೆ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಈ ತೀರ್ಮಾನದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ ೮೦, ೮೧, ೮೨, ೮೪ರಂತೆ ಎಲ್ಲಾ ಬಾಣೆ ಜಮೀನುಗಳಿಗೆ ಕಂದಾಯ ನಿಗದಿಯನ್ನು ಸರಕಾರವೇ ರೈತರಿಂದ ಪ್ರತ್ಯೇಕ ಅರ್ಜಿಯನ್ನು ಪಡೆಯದೆ ಸ್ವಯಂ ಪ್ರೇರಿತವಾಗಿ ಮಾಡಬೇಕು, ಕಂದಾಯ ನಿಗದಿ ಕಡತ ವಿಲೇವಾರಿ ಮಾಡಲು ಸಮಯ ನಿಗದಿ ಅವಧಿ ಪಾಲನೆಯಾಗದೆ ಇರುವುದು ಭ್ರಷ್ಟಾಚಾರಕ್ಕೂ ಕಾರಣವಾಗುತ್ತಿದೆ ಮತ್ತು ರೈತರು ಕಚೇರಿಗಳಲ್ಲಿ ಅಲೆದಾಡುವಂತಾಗಿದೆ. ಈ ಕಾರಣದಿಂದಾಗಿ ಸರಕಾರವೇ ಎಲ್ಲಾ ಬಾಣೆ ಜಾಗಗಳಿಗೂ ಕಂದಾಯ ನಿಗದಿ ಮಾಡಲು ಸಮಯ ನಿಗದಿ ಮಾಡಿ ಉಪ ವಿಭಾಗಾಧಿಕಾರಿ ಮತ್ತು ಡಿ.ಡಿ.ಎಲ್.ಆರ್. ನೇತೃತ್ವದಲ್ಲಿ ಹೋಬಳಿ ಮಟ್ಟದಲ್ಲಿ ಆಂದೋಲನ ನಡೆಸಬೇಕು ಹಾಗೂ ಇದನ್ನು ಸಕಾಲ ವ್ಯಾಪ್ತಿಗೆ ತರಬೇಕೆಂಬುದು ಅವರುಗಳ ಒತ್ತಾಯವಾಗಿದೆ.