ಚೆಟ್ಟಳ್ಳಿ, ಜ. ೮: ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯಲಿದ್ದು, ತಾ. ೧೦ ರಿಂದ ೧೨ ರವರೆಗೆ ನವೀಕರಣ ಬ್ರಹ್ಮಕಲಶಾ ಭಿಷೇಕ ಪೂಜೆ ನೆರವೇರಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

೧೯೬೫ನಲ್ಲಿ ಊರಿನವರ ಸಹಕಾರದೊಂದಿಗೆ ಅಯ್ಯಪ್ಪ ಭಕ್ತಾದಿಗಳು ಚೆಟ್ಟಳ್ಳಿಯ ನೆಲ್ಲಿಹಡ್ಲು (ಕಂಡಕರೆಯ) ಸಮೀಪ ಅಯ್ಯಪ್ಪ ದೇವರ ಪುಟ್ಟ ನೆಲೆಯನ್ನು ಸ್ಥಾಪಿಸಲಾಯಿತು. ಹಿಂದೆ ಚೆಟ್ಟಳ್ಳಿ ಪಟ್ಟಣದ ಸಮೀಪ ಇದ್ದ ಸುಬ್ರಹ್ಮಣ್ಯ ದೇವಾಲಯದಿಂದ ಅಯ್ಯಪ್ಪ ದೇವಾಲಯದವರೆಗೆ ಕಾವಾಡಿ ನೃತ್ಯದೊಂದಿಗೆ ಉತ್ಸವ ಆಚರಿಸ ಲಾಗುತ್ತಿತ್ತು. ೧೯೭೮ ರಲ್ಲಿ ದೇವಾಲಯ ಸಮಿತಿ ನೂತನ ದೇವಾಲಯವನ್ನು ಸ್ಥಾಪಿಸಲು ಪ್ರಾರಂಭಿಸಿ ಪುತ್ತೂರಿನ ಕೆಮ್ಮಂಜೆ ಕೇಶವ ತಂತ್ರಿಗಳ ಮಾರ್ಗದರ್ಶನದೊಂದಿಗೆ ೧೯೮೨ ರಲ್ಲಿ ನೂತನ ಅಯ್ಯಪ್ಪ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ದೇವಾಲ ಯವನ್ನು ಹಾಗೂ ೨೦೦೯ ರಲ್ಲಿ ಗಣಪತಿ ಗುಡಿಯನ್ನು ನಿರ್ಮಿಸ ಲಾಯಿತು. ನಂತರದಲ್ಲಿ ದೇವಾಲ ಯದ ಸಮೀಪ ಸಭಾಂಗಣ ಹಾಗೂ ಸುವರ್ಣ ಗ್ರಾಮ ಯೋಜನೆಯಡಿ ಅಡುಗೆ ಕೋಣೆ ನಿರ್ಮಿಸಲಾಯಿತು.

ಪ್ರತಿ ತಿಂಗಳ ಸಂಕ್ರಮಣ ದಿನದ ರಾತ್ರಿ ದೇವಾಲಯದಲ್ಲಿ ಸಂಕ್ರಮಣ ಪೂಜೆ ಹಾಗೂ ಡಿಸೆಂಬರ್ ತಿಂಗಳAದು ಮಂಡಲ ಪೂಜೆ ಹಾಗೂ ಅಯ್ಯಪ್ಪ ಬೆಳಕ್ ಪೂಜೆ ನಡೆಯುತ್ತದೆ.

ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಶಿವ ಸುಬ್ರಮಣ್ಯ ಭಟ್ ತಂತ್ರಿಗಳ ಮಾರ್ಗದರ್ಶನದೊಂದಿಗೆ ೧೨ ವರ್ಷಗಳ ನಂತರ ದೇವಾಲಯದಲ್ಲಿ ಹಲವು ನವೀಕರಣ ಕಾರ್ಯ ದೊಂದಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

ತಾ. ೧೦ ರಂದು ಸಂಜೆ ೫ ಗಂಟೆಗೆ ತಂತ್ರಿಗಳ ಆಗಮನದೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಶಿವ ಸುಬ್ರಮಣ್ಯ ಭಟ್ ತಂತ್ರಿಗಳ ಮುಂದಾಳತ್ವದಲ್ಲಿ ಪೂರ್ಣಕುಂಭ ಸ್ವಾಗತ ನಡೆಯಲಿದೆ. ಸಂಜೆ ೫.೩೦ಕ್ಕೆ ಸಪ್ತ ಶುದ್ಧಿ, ಪುಣ್ಯಾಹ, ದೇವತಾ ಪ್ರಾರ್ಥನೆ, ಋತ್ಯವರಣ, ಗೋನಿ ವಾಸ, ರಾಕ್ಷೋಘ್ನ ಹವನ, ವಾಸ್ತು ಪೂಜೆ, ವಾಸ್ತು ಹವನ, ವಾಸ್ತುಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ತಾ. ೧೧ ರಂದು ಬೆಳಿಗ್ಗೆ ೭ಕ್ಕೆ ಗಣಪತಿ ಹವನ, ನವಗ್ರಹ ಶಾಂತಿ, ರುದ್ರಾಭಿಶೇಖ, ಪುರಾಣ ಪಾರಾಯಣ, ನವ ಕಲಶ ಪ್ರತಿಷ್ಠೆ ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ೫ಕ್ಕೆ ಬ್ರಹ್ಮ ಕಲಶ ಪ್ರತಿಷ್ಠೆ, ಅಧಿವಾಸ ಹವನ, ದುರ್ಗಾ ಪೂಜೆ, ಚಂಡಿಕಾ ಹವನ, ಅಷ್ಠಾವಧಾನ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ತಾ. ೧೨ ರಂದು ಬೆಳಿಗ್ಗೆ ೬ ಗಂಟೆಗೆ ಪ್ರತಿಷ್ಠಾನ ಹವನ, ಪುರಾಣ ಪಾರಾಯಣ, ಪವಮಾನ ಹವನ ಪೂರ್ಣಾಹುತಿ ೧೦.೪೦ ಗಂಟೆಗೆ ಮಹಾಗಣಪತಿ ಸಹಿತ ಅಯ್ಯಪ್ಪ ಸ್ವಾಮಿಗೆ ಬ್ರಹ್ಮ ಕಲಶಾಭಿಷೇಕ, ಕಲ್ಪೋಕ್ತ ಪೂಜೆ, ಅಶ್ವಥ್ಥ ನಾರಾಯಣ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಂತ್ರಾಕ್ಷತೆ ನಡೆಯಲಿದೆ.

- ಕರುಣ್ ಕಾಳಯ್ಯ