ಮಡಿಕೇರಿ, ಜ. ೮: ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಯುವ ಸಪ್ತಾಹ ಅಂಗವಾಗಿ ಜಿಲ್ಲೆಯ ವಿವಿಧ ಯುವ ಸಂಘಗಳಲ್ಲಿ ವಿವಿಧ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ತಾ. ೧೨ ರಂದು ಉದ್ಘಾಟನಾ ಕಾರ್ಯಕ್ರಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯಲ್ಲಿ ನಡೆಯಲಿದೆ. ತಾ. ೧೩ ರಂದು ಪೊನ್ನಂಪೇಟೆ - ಹಳ್ಳಿಗಟ್ಟುವಿನ ಯುವಶಕ್ತಿ ಯುವಕ ಸಂಘ ಆಶ್ರಯದಲ್ಲಿ ಸಾಂಸ್ಕೃತಿಕ ದಿನ, ತಾ. ೧೪ ರಂದು ಮಡಿಕೇರಿ ತಾಲೂಕು ತಾಳತ್ತಮನೆಯ ಅಂಬಾಭವಾನಿ ಯುವಕ-ಯುವತಿ ಮಂಡಳಿ ಅವರಿಂದ ಭಾಗವಹಿಸುವ ದಿನ, ತಾ. ೧೫ ರಂದು ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿ ಅವರಿಂದ ಸಮಾಜ ಸೇವಾ ದಿನ, ತಾ. ೧೬ ರಂದು ವೀರಾಜಪೇಟೆಯ ಶ್ರೀದೇವಿ ಯುವತಿ ಮಂಡಳಿ ಅವರಿಂದ ದೈಹಿಕ ಸಾಮರ್ಥ್ಯ ದಿನ, ತಾ. ೧೭ ರಂದು ವಿಘ್ನೇಶ್ವರ ಯುವತಿ ಮಂಡಳಿ ವೀರಾಜಪೇಟೆ ಅವರಿಂದ ಸಮಾಜಕ್ಕಾಗಿ ಯುವ ಜನರು ಕಾರ್ಯಕ್ರಮ, ತಾ. ೧೮ ರಂದು ಧನಲಕ್ಷಿö್ಮÃ ಯುವತಿ ಮಂಡಳಿ ಮಡಿಕೇರಿ ಇವರಿಂದ ಕೌಶಲ್ಯ ದಿನ ಹಾಗೂ ತಾ. ೧೯ ರಂದು ಚೌಡೇಶ್ವರಿ ಯುವಕ ಸಂಘ ಮಡಿಕೇರಿಯಿಂದ ಮಾಹಿತಿ ದಿನ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.