ಮಡಿಕೇರಿ, ಜ. ೮: ಏಪ್ರಿಲ್ ೧ ರಿಂದ ಸೆಪ್ಟೆಂಬರ್ ೩೦ ೨೦೨೨ ರವರೆಗೆ ಇದ್ದ ಒಖಿಈ ಯೋಜನೆಯನ್ನು ಮಾರ್ಚ್ ೩೧, ೨೦೨೩ ರವರೆಗೆ ಮುಂದುವರೆಸಲು ಅನುಮೋದನೆ ದೊರೆತಿದ್ದು, ೨೫ ಎಕರೆ ಒಳಗಿನ ಎಲ್ಲಾ ಸಣ್ಣ ಕಾಫಿ ಬೆಳೆಗಾರರು ವಿವಿಧ ಕೆಲಸಗಳಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ೨೦೨೩ ರ ಫೆಬ್ರವರಿ ೧೫ ಕೊನೆಯ ದಿನವಾಗಿದೆ. ಅರ್ಹ ಬೆಳೆಗಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ಅರುವತೊಕ್ಲಲು ಕಚೇರಿಯ ಉಪ ನಿರ್ದೇಶಕರಾದ ಡಾ. ಶ್ರೀದೇವಿ ತಿಳಿಸಿದ್ದಾರೆ.
ಸೌಲಭ್ಯಗಳು: ರಿಪ್ಲಾಂಟೇಶನ್ - ೨೫ ವರ್ಷಕ್ಕೂ ಮೀರಿದ ಎತ್ತರದ ಅರೇಬಿಕಾ ಹಾಗೂ ೧೫ ವರ್ಷ ಮೀರಿದ ಕುಬ್ಜ ಅರೇಬಿಕಾ ತಳಿಗಳು ಹಾಗೂ ೪೦ ವರ್ಷ ಮೀರಿದ ರೊಬಸ್ಟಾ ಅನುತ್ಪಾದಕ ತೋಟಗಳಲ್ಲಿ, ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ಹಾಕಲು (ಮರುನಾಟಿ) ಕೆರೆ ನೀರಾವರಿ ವ್ಯವಸ್ಥೆ ಸಹಾಯಧನವು ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
೨೫ ಎಕರೆ ಒಳಗಿನ ವೈಯಕ್ತಿಕ ಸಣ್ಣ ಬೆಳೆಗಾರರಿಗೆ ಮಾತ್ರ ಅನ್ವಯವಾಗುವುದು. ರಿಪ್ಲಾಂಟೇಶನ್ ಹಾಗೂ ಯಾಂತ್ರೀಕರಣ ಹೊರತುಪಡಿಸಿ, ಕಳೆದ ಹತ್ತು ವರ್ಷಗಳಲ್ಲಿ ೨೦೧೨-೧೩ ರಿಂದ ಕಾಫಿ ಮಂಡಳಿಯಿAದ ಯಾವುದೇ ಸಹಾಯಧನ ಪಡೆದಿರಬಾರದು. ಸಾಮಾನ್ಯ ವರ್ಗದ ಬೆಳೆಗಾರರಿಗೆ ಸಹಾಯಧನ ಶೇ. ೪೦. ಪರಿಶಿಷ್ಟ ಜಾತಿ ಮತ್ತು ಪಂಗಡದ ಬೆಳೆಗಾರರಿಗೆ ಸಹಾಯಧನ ಶೇ. ೫೦. ಮೇಲಿನ ಯಾವುದೇ ಒಂದು ಕೆಲಸಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಅಗತ್ಯವಿರುವ ದಾಖಲೆಗಳು
ಅರ್ಜಿ (ಕಾಫಿ ಮಂಡಳಿಯ ಕಚೇರಿಯಲ್ಲಿ ಲಭ್ಯ) ಅಥವಾ ತಿತಿತಿ.iಟಿಜiಚಿಛಿoಜಿಜಿee.oಡಿg ವೆಬ್ ಸೈಟ್ ನೋಡಬಹುದು. ಸಹಿ ಮಾಡಿದ ಪಾಸ್ ಪೋರ್ಟ್ ಅಳತೆಯ ಫೋಟೋ, ಹಿಡುವಳಿದಾರರ ಹೆಸರಲ್ಲಿ ಇರುವ ಎಲ್ಲಾ ಕಾಫಿ ತೋಟಗಳ ಪಹಣಿಗಳು (ಖಖಿಅ), ಸ್ವಯಂ ಸಹಿ ಮಾಡಿದ ಅಂದಾಜು ನಕ್ಷೆ ಹಾಗೂ ಚಕ್ಕುಬಂದಿ ಖಾತಾ ನಕಲು/ಮ್ಯುಟೇಶನ್/ಪಟ್ಟೆ ಪುಸ್ತಕ. ಕೆಲಸಗಳಿಗೆ ತಗಲುವ ಅಂದಾಜು ವೆಚ್ಚ ಹಾಗೂ ಪ್ಲಾನ್, ಸ್ಪಿçಂಕ್ಲರ್ / ಡ್ರಿಪ್ ನೀರಾವರಿ ಉಪಕರಣಗಳಿಗೆ ಕೊಟೇಶನ್. ಎಲ್ಲಾ ದಾಖಲಾತಿಗಳ ಮೂಲ ಪ್ರತಿ, ಸ್ಕಾö್ಯನ್ ಮಾಡಿದ ದಾಖಲಾತಿಗಳು, ಮೊದಲು ಬಂದವರಿಗೆ ಮೊದಲ ಆದ್ಯತೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.