*ಗೋಣಿಕೊಪ್ಪ, ಜ. ೮: ಒತ್ತಡ ಹಾಕಿಕೊಳ್ಳದೆ ನಿಯಮಿತ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಓದುವ ಹವ್ಯಾಸದೊಂದಿಗೆ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ನಿರೀಕ್ಷಿಸಿದ ಫಲಿತಾಂಶವನ್ನು ಪಡೆಯಲು ಸಾಧ್ಯವಿದೆ ಎಂದು ಅಂತರರಾಷ್ಟಿçಯ ಅಥ್ಲೇಟಿಕ್, ಮೋಟಿವೇಷನ್ ಗುರು ತೀತಮಾಡ ಅರ್ಜುನ್ ದೇವಯ್ಯ ಸ್ಪೂರ್ತಿದಾಯಕ ಮಾತುಗಳ ಮೂಲಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಪರೀಕ್ಷೆ ಎದುರಿಸಲು ಪ್ರೇರೇಪಿಸಿದರು.

ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ವಿಕಸನ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಗೋಣಿಕೊಪ್ಪ ಲಯನ್ಸ್ ಸಂಸ್ಥೆ, ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘ ಸಹಯೋಗದಲ್ಲಿ ಆಯೋಜಿಸಿದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರೇರಣ ವಿಶೇಷ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಪೂರ್ತಿದಾಯಕ ನುಡಿಗಳನ್ನಾಡಿದರು.

ಸಾಧನೆ ಮಾಡಲೇ ಬೇಕು ಎಂಬ ತುಡಿತ ಇದ್ದರೆ ಮತ್ತು ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಜ್ಞಾನ ಹೊಂದಿದ್ದರೆ ಸೊನ್ನೆಯಲ್ಲಿರುವವನು ನೂರು ಅಂಕಗಳಿಸಲು ಸಾಧ್ಯವಿದೆ. ವೇಳಾಪಟ್ಟಿಯಂತೆ ಪ್ರತಿನಿತ್ಯ ಓದಿದಾಗ ಪರೀಕ್ಷೆ ಎದುರಿಸುವ ಆತ್ಮಸ್ಥೆöÊರ್ಯವನ್ನು ತುಂಬಿಕೊಳ್ಳಬಹುದಾಗಿದೆ. ಪ್ರತಿನಿತ್ಯ ಕನಿಷ್ಟ ೬ ಗಂಟೆ ನಿದ್ರಿಸಿ ಉಳಿದ ಸಮಯದಲ್ಲಿ ಅಧ್ಯಯನಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಟ್ಟು ಹಂತ ಹಂತವಾಗಿ ಓದಿದಾಗ ಹೆಚ್ಚಿನ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂದು ಮಾರ್ಗದರ್ಶನ ನೀಡಿದರು.

ಬೇರೆಯವರ ತಪುö್ಪಗಳನ್ನು ಗ್ರಹಿಸುವ ಬದಲು ಹಿರಿಯ ಸಾಧಕರ ಬಗ್ಗೆ ಗಮನ ಹರಿಸಿದಾಗ ನಮ್ಮಲ್ಲಿ ಉನ್ನತ ನಡೆಯನ್ನು ಕಂಡುಕೊಳ್ಳಬಹುದಾಗಿದೆ. ಗುರುಗಳು ನಮ್ಮ ಜೀವನದ ದಾರಿ ದೀಪ. ಅವರನ್ನು ದ್ವೇಷಿಸದೇ ಅವರು ತಿಳಿಸುವ ವಿಷಯಗಳ ಬಗ್ಗೆ ಮನನ ಮಾಡಿಕೊಂಡು ಬದುಕಿನ ದಾರಿಯನ್ನು ಸುಗಮಗೊಳಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮುಂದಿನ ಪರೀಕ್ಷೆಯನ್ನು ಎದುರಿಸಲು ಈಗಿನಿಂದಲೇ ವಿದ್ಯಾರ್ಥಿಗಳು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಶಿಕ್ಷಕರು ನೀಡುವ ಮಾರ್ಗದರ್ಶನದಂತೆ ಅಧ್ಯಾಯಶೀಲರಾದಾಗ ಉತ್ತಮ ಫಲಿತಾಂಶವನ್ನು ಗಳಿಸಬಹುದು. ಸಮಯವನ್ನು ವ್ಯರ್ಥ ಮಾಡದೇ ನಿರಂತರವಾಗಿ ಇರುವ ೮೦ ದಿನ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ. ಅಮ್ಮಂಡ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಕೊಡಗು ವಿಕಸನ ಸಂಸ್ಥಾಪಕ ಚೇಯ್ಯಂಡ ಸತ್ಯ ಗಣಪತಿ, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಕೊಂಗAಡ ಪಿ. ಅಚ್ಚಯ್ಯ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಲಯನ್ಸ್ ಕಾಲೇಜು ಪ್ರಾಂಶುಪಾಲೆ ಚಿಯಕ್‌ಪೂವಂಡ ಲತಾಕುಮಾರಿ ಹಾಗೂ ಲಯನ್ಸ್ ವಿದ್ಯಾಸಂಸ್ಥೆಯ ಬೋಧಕ ಮತ್ತು ಬೋಧಕೇತರ ವೃಂದ ಮತ್ತು ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆ, ಸೆಂತ ಥೋಮಸ್, ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆ, ಲಯನ್ಸ್ ವಿದ್ಯಾಸಂಸ್ಥೆ, ಸರ್ವದೈವತಾ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳು ಇದ್ದರು.