ಚೆಟ್ಟಳ್ಳಿ, ಜ. ೮: ಕಾವೇರಿ ತಮಿಳು ಸಂಘ ವತಿಯಿಂದ ತಾ. ೧೫ರಂದು ಸಿದ್ದಾಪುರದಲ್ಲಿ ಪೊಂಗಲ್ ಹಬ್ಬವನ್ನು ಅದ್ಧೂರಿಯಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಅಧ್ಯಕ್ಷ ಪಿ. ತಿರುಮಲ ರಾಜ ತಿಳಿಸಿದ್ದಾರೆ.

ಸಿದ್ದಾಪುರ ಸೆಂಟನರಿ ಚರ್ಚ್ ಹಾಲ್ ಆವರಣದಲ್ಲಿ ಜನವರಿ ೧೫ರಂದು ಬೆಳಿಗ್ಗೆ ೭ನೇ ವರ್ಷದ ಪೊಂಗಲ್ ಹಬ್ಬದ ಕಾರ್ಯಕ್ರಮಕ್ಕೆ ಸಮಾಜಸೇವಕರು, ಜನಪ್ರತಿನಿಧಿಗಳು, ಗಣ್ಯರು ಚಾಲನೆ ನೀಡಲಿದ್ದು ಸಂಜೆವರೆಗೂ ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕೊಡಗು ಜಿಲ್ಲೆಯಲ್ಲಿರುವ ತಮಿಳು ಸಮುದಾಯ ಬಾಂಧವರನ್ನ ಹಬ್ಬ ಆಚರಣೆಯ ಮೂಲಕ ಒಗ್ಗೂಡಿಸುವುದರೊಂದಿಗೆ ಶಿಕ್ಷಣ, ಆರೋಗ್ಯ, ಸಂಕಷ್ಟದಲ್ಲಿರುವವರಿಗೆ ನೆರವು ಸೇರಿದಂತೆ ನಿರಂತರ ಸಮಾಜ ಬಾಂಧವರ ಏಳಿಗೆಗಾಗಿ ಶ್ರಮಿಸುತ್ತಿದ್ದು ಪೊಂಗಲ್ ಹಬ್ಬವನ್ನು ಸಂಭ್ರಮದಿAದ ಆಚರಿಸಲು ಎಲ್ಲರೂ ಕೈಜೋಡಿಸಬೇಕೆಂದರು.

ಕಾವೇರಿ ತಮಿಳು ಸಂಘದ ಕಾರ್ಯದರ್ಶಿ ಫ್ರಾನ್ಸಿಸ್ ಮಾತನಾಡಿ ಪೊಂಗಲ್ ಹಬ್ಬದ ಆಚರಣೆಯ ಅಂಗವಾಗಿ ಸಮುದಾಯ ಬಾಂಧವರಿಗೆ ಮಡಿಕೆ ಹೊಡೆಯುವ ಸ್ಪರ್ಧೆ, ಮಕ್ಕಳ ನೃತ್ಯ ಸ್ವರ್ಧೆ, ಮಹಿಳೆಯರು ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು ಸಾಂಸ್ಕೃತಿಕ ನೃತ್ಯ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳ ಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾವೇರಿ ತಮಿಳು ಸಂಘದ ಉಪಾಧ್ಯಕ್ಷರುಗಳಾದ ಧರ್ಮರಾಜ್, ನಾಗರಾಜ್, ಗಣೇಶ್, ಗೌರವ ಸಲಹೆಗಾರರಾದ ಕಣ್ಣಿನ್,ಸೇದುರಾಮನ್, ಮೈಕಲ್, ವೇಲು, ಖಜಾಂಚಿ ಮುತ್ತುವೆಲ್ ತಂಬಿ, ಸಲಹೆಗಾರರಾದ ಮುರುಗೇಶ್, ಸಬರಿ, ಶೇಖರ್, ಕುಮಾರ್, ಸೇತುರಾಮ್,ಮಣಿ, ಮುರುಗೇಶ್, ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.