ಸೋಮವಾರಪೇಟೆ, ಜ. ೮: ಇಲ್ಲಿನ ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆಯ ನೂತನ ಸಾಲಿನ ಅಧ್ಯಕ್ಷರಾಗಿ ಜಿ.ಪಂ. ಮಾಜಿ ಸದಸ್ಯೆ ಪೂರ್ಣಿಮಾ ಗೋಪಾಲ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಆಶಾ ಯೋಗೇಂದ್ರ ಆಯ್ಕೆಯಾಗಿದ್ದಾರೆ.

ಒಕ್ಕಲಿಗರ ಸಮುದಾಯ ಭವನದಲ್ಲಿ ನಿಕಟಪೂರ್ವ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರಾಗಿ ಹರಿಣಿ ಕುಶಾಲಪ್ಪ, ಖಜಾಂಚಿಯಾಗಿ ತನ್ಮಯಿ ಪ್ರವೀಣ್, ಬಾತ್ಮೀದಾರರಾಗಿ ಚಂದ್ರಿಕಾ ಕುಮಾರ್ ಆಯ್ಕೆಯಾಗಿದ್ದಾರೆ.