ಮಡಿಕೇರಿ, ಜ. ೮ : ಕೊಡಗು ಜಿಲ್ಲೆಯಲ್ಲಿರುವ ದೈವ ಆರಾಧಕರು ಹಾಗೂ ದೈವ ನರ್ತಕರ ಸಭೆ ತಾ.೧೩ ರಂದು ಬೆಳಗ್ಗೆ ೧೦ ಗಂಟೆಗೆ ಮಡಿಕೇರಿಯ ಬಾಲಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತುಳುನಾಡಿನ ದೈವಾರಾಧÀನೆಯ ಬಹಳಷ್ಟು ದೈವ ಕ್ಷೇತ್ರಗಳಿವೆ. ದೈವ ಆರಾಧಕರು ಹಾಗೂ ದೈವ ನರ್ತಕರು ಕೂಡ ಇದ್ದಾರೆ. ಇತ್ತೀಚಿನ ದಿನಗಳÀಲ್ಲಿ ರಾಜ್ಯದ ಹಲವೆಡೆ ದೈವ ಮತ್ತು ದೈವಾರಾಧನೆಯನ್ನು ಅವಮಾನಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅವಮಾನಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ನಿರ್ಧಾರ ಕೈಗೊಳ್ಳಲಾಗುವುದು.

ಅಲ್ಲದೆ ಜಿಲ್ಲೆಯಲ್ಲಿರುವ ತುಳುನಾಡಿನ ದೈವ ಕ್ಷೇತ್ರಗಳ ಇತಿಹಾಸವನ್ನು ದಾಖಲೀಕರಣ ಮಾಡಿ ಪುಸ್ತಕದ ರೂಪದಲ್ಲಿ ಹೊರ ತರುವುದು, ದೈವಕೋಲ ಮತ್ತು ನೇಮೋತ್ಸವವನ್ನು ಕ್ರಮಬದ್ಧವಾಗಿ ನಡೆಸುವುದು, ದೈವಕ್ಷೇತ್ರಗಳ ಅಭಿವೃದ್ಧಿ ಕುರಿತು ಸರಕಾರಕ್ಕೆ ಮನವಿ ನೀಡುವುದು, ದೈವಾರಾಧಕರು ಹಾಗೂ ದೈವ ನರ್ತಕರÀ ಸಂಘ ರಚಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂ ೯೯೭೨೦ ೭೩೨೯೫ ಸಂಪರ್ಕಿಸಬಹುದಾಗಿದೆ. ಎಂದು ರವಿ ಹೇಳಿದ್ದಾರೆ.