ಮಡಿಕೇರಿ, ಜ. ೯: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಮೂರು ತಿಂಗಳ ಕಾಲ ನಡೆದ ಹೋರಾಟ ದಲ್ಲಿ ಶೇ. ೭೫ ರಷ್ಟು ಬೇಡಿಕೆಗಳು ಈಡೇರಿದ ಹಿನ್ನೆಲೆಯಲ್ಲಿ ಮಡಿಕೇರಿ ಎಲ್‌ಐಸಿ ಪ್ರತಿನಿಧಿಗಳ ಒಕ್ಕೂಟದಿಂದ ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗ ಣದಲ್ಲಿ ವಿಜಯೋತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಲ್‌ಐಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ದೀಪಕ್ ಕುಮಾರ್ ಸುರಾನ ಮಾತನಾಡಿ, ೩ ಕೋಟಿ ೭೫ ಲಕ್ಷ ರೂ.ಗಳ ವ್ಯವಹಾರದ ಗುರಿಯನ್ನು ಮೂರು ತಿಂಗಳಲ್ಲಿ ಮುಗಿಸಬೇಕಾಗಿದೆ. ಅದಕ್ಕಾಗಿ ಎಲ್ಲಾ ಪ್ರತಿನಿಧಿಗಳು ಕೆಲಸ ಮಾಡ ಬೇಕಾಗಿದೆ ಎಂದರು. ಲಿಯಾಫಿ ಅಧ್ಯಕ್ಷ ಮಂಜುನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಎಲ್ಲಾ ಪ್ರತಿನಿಧಿಗಳು ಮೂರು ತಿಂಗಳ ಕಾಲ ನಡೆದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪ್ರತಿಫಲವಾಗಿ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಲು ಸಾಧ್ಯವಾಯಿತು. ಇದು ಎಲ್ಲಾ ಪ್ರತಿನಿಧಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಹಿರಿಯ ಅಭಿವೃದ್ಧಿ ಅಧಿಕಾರಿ ನಟರಾಜ್ ಮಾತನಾಡಿ, ಹೋರಾಟದ ವಿಜಯೋತ್ಸವ ಆಚರಿಸುತ್ತಿರುವುದು ಖುಷಿಯ ವಿಚಾರ. ಹೋರಾಟ ಮಾಡಿಯೇ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿರ ಬೇಕಾದ ಈ ಸಂದರ್ಭ ದಲ್ಲಿ ಲಿಯಾಫಿ ಸಂಘಟನೆ ಮೂಲಕ ಯಶಸ್ವಿ ಹೋರಾಟ ಮಾಡಿ ತಮ್ಮ ಬಹುತೇಕ ಸೌಲಭ್ಯಗಳನ್ನು ಪಡೆಯುತ್ತಿದ್ದೀರಿ. ಅದೇ ರೀತಿ ನಿಮ್ಮ ವ್ಯವಹಾರಗಳನ್ನು ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಹಾಗೆಯೇ ಇಂದು ತಂತ್ರಜ್ಞಾನ ಬೆಳೆಯುತ್ತಿದ್ದು ಎಲ್‌ಐಸಿ ಕೂಡ ಅದನ್ನು ಅಳವಡಿಸಿಕೊಂಡಿದೆ. ಅದನ್ನು ಪ್ರತಿನಿಧಿಗಳು ಬಳಸಿಕೊಂಡು ತಮ್ಮ ವ್ಯವಹಾರಗಳನ್ನು ಉನ್ನತಗೊಳಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಲಿಯಾಫಿ ಮುಖಂಡ ಪ್ರೇಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ದರು. ಸತೀಶ್ ವಂದಿಸಿದರು. ವೇದಿಕೆಯಲ್ಲಿ ಖಜಾಂಚಿ ಸವಿತಾ, ಪ್ರಧಾನ ಕಾರ್ಯದರ್ಶಿ ಭೀಮಯ್ಯ, ಉಪಾಧ್ಯಕ್ಷ ಚಾಮ ಇದ್ದರು.