ಮಡಿಕೇರಿ,ಜ.೯: ಮೂರ್ನಾಡು ಸಮೀಪದ ಮುತ್ತಾರ್ಮುಡಿ ಗ್ರಾಮದಲ್ಲಿರುವ ಸಂರಕ್ಷಿತ ಭದ್ರಕಾಳಿ ದೇವರ ಕಾಡಿನಲ್ಲಿ ಅಕ್ರಮವಾಗಿ ೨ ಹೆಣ್ಣು ಕಾಡು ಕುರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿಸಿದ್ದಾರೆ. ಕಾಫಿ ಕೆಲಸಕ್ಕಾಗಿ ಮುತ್ತಾರ್ಮುಡಿಗೆ ಬಂದಿದ್ದ ತಮಿಳುನಾಡಿನ ಸೇಲಂ ಜಿಲ್ಲೆ ಅತ್ತೂರು ನಿವಾಸಿಗಳಾದ ಜಯರಾಮ್, ಮಥಾಯಂ, ಅಶೋಕ್ ಮತ್ತು ಮುತ್ತಾರ್ಮುಡಿ ಗ್ರಾಮ ನಿವಾಸಿ ತಮ್ಮಯ್ಯ ಎಂಬವರೇ ಬಂದಿತ ಆರೋಪಿಗಳು.
ಶನಿವಾರ ರಾತ್ರಿ ಭದ್ರಕಾಳಿ ದೇವರ ಕಾಡಿಗೆ ತಂಡವೊAದು ಬೇಟೆಗೆ ತೆರಳಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ವಿಭಾಗದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ೩ ಮಂದಿ ಬೇಟೆಗಾರರನ್ನು ಬಂದಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ಅಲ್ಲಿನ ನಿವಾಸಿ ತಮ್ಮಯ್ಯ ಎಂಬವರ ಬಂದೂಕು ಬಳಸಿ ೨ ಹೆಣ್ಣು ಕಾಡು ಕುರಿಗಳನ್ನು ಬೇಟೆಯಾಡಿರುವುದಾಗಿ ಭಾನುವಾರ ಬೆಳಗೆ ಅರಣ್ಯ ಅಧಿಕಾರಿಗಳು ಬಂದಿಸಿದ್ದಾರೆ.
ಆರೋಪಿಗಳಿAದ ಕೃತ್ಯಕ್ಕೆ ಬಳಸಿದ್ದ ಒಂಟಿ ನಳಿಕೆಯ ಒಂದು ಕೋವಿ, ಬಳಕೆಯಾಗಿರುವ ೧ ಕಾಡತೂಸು ಮತ್ತು ೨ ಹೆಣ್ಣು ಕಾಡು ಕುರಿಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯ ಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ.
ಡಿಎಫ್ಓ ಎ.ಟಿ. ಪೂವಯ್ಯ ಮಾರ್ಗದರ್ಶನದಲ್ಲಿ ಎಸಿಎಫ್ ಮೊಹಿಸಿನ್ ಬಾಷಾ, ಆರ್ಎಫ್ಓ ಹನುಮಂತ್ ರಾಜು, ಡಿಆರ್ಎಫ್ಓ ಮಲ್ಲಯ್ಯ ಹಿರೇಮಠ, ಯತೀಶ್, ಸಿಬ್ಬಂದಿಗಳಾದ ಭವ್ಯ, ವಾಸುದೇವ್, ಸಂಜು, ಮೋಹನ್, ಶರತ್, ನಿಖಿಲ್, ತಿಮ್ಮಯ್ಯ, ಚಂದ್ರು ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.