ಮಡಿಕೇರಿ, ಜ. ೭: ಮಡಿಕೇರಿಯ ನವೋದಯ ವಿದ್ಯಾಲಯದ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವಂತೆ ಜವಾಹರ್ ನವೋದಯ ವಿದ್ಯಾಲಯ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೬ನೇ ತರಗತಿ ಪ್ರವೇಶಾತಿಗೆ ಒಟ್ಟು ೮೦ ಸೀಟ್ಗಳು ಲಭ್ಯವಿದ್ದು, ಪರಿಶಿಷ್ಟ ಜಾತಿಗೆ ೧೫%, ಪರಿಶಿಷ್ಟ ಪಂಗಡಕ್ಕೆ ೭.೫%, ಕೇಂದ್ರ ಹಿಂದುಳಿದ ವರ್ಗಕ್ಕೆ ೨೭% ಸೇರಿದಂತೆ ದಿವ್ಯಾಂಗರಿಗೆ, ಬಾಲಕಿಯರಿಗೆ ೧/೩ ಸ್ಥಾನಕ್ಕೆ ಅವಕಾಶವಿದೆ. ನವೋದಯ ವಿದ್ಯಾಲಯದಲ್ಲಿ ವಸತಿ ನಿಲಯದ ವ್ಯವಸ್ಥೆಯೊಂದಿಗೆ ಸಂಪೂರ್ಣ ಉಚಿತ ಶಿಕ್ಷಣ ದೊರೆಯಲಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣವಂತರಾಗಬೇಕು. ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೆಚ್ಚಾಗಿ ಅರ್ಜಿ ಸಲ್ಲಿಸಬೇಕು. ಲಭ್ಯವಿರುವ ೮೦ ಸೀಟ್ಗಳ ಪೈಕಿ ಶೇ ೭೫ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತದೆ. ನವೋದಯದಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ವಿದ್ಯಾರ್ಥಿಗಳು ಇಂದು ಉತ್ತಮ ಸ್ಥಾನದಲ್ಲಿದ್ದಾರೆ. ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪೋಷಕರಿಗೆ ಆರ್ಥಿಕ ಹೊರೆ ತಗ್ಗುತ್ತದೆ. ಇದರಲ್ಲಿ ಅವಕಾಶ ದೊರೆಯದಿದ್ದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ವಸತಿ ನಿಲಯಗಳಲ್ಲಿ ಅರ್ಜಿ ಸಲ್ಲಿಸುವಂತೆ ಕೋರಿದರು.
ನವೋದಯ ಪರೀಕ್ಷೆ ೩ ಪ್ರಶ್ನೆ ಪತ್ರಿಕೆಯನ್ನು ಹೊಂದಿರುತ್ತದೆ. ೧-೦೫-೨೦೧೧ ರಿಂದ ೩೦-೪-೨೦೧೩ ರೊಳಗೆ ಜನಿಸಿದವರು, ಕೊಡಗು ಜಿಲ್ಲೆಯ ನಿವಾಸಿಯಾಗಿರುವವರು ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಆಧಾರ್ ಕಾಡ್, ವಾಸ, ಜಾತಿ, ಆಧಾಯ ಧೃಢೀಕರಣ, ವ್ಯಾಸಂಗ ಪ್ರಮಾಣ ಪತ್ರ ಸಹಿತ hಣಣಠಿs://ಟಿಚಿvoಜಚಿಥಿಚಿ.gov.iಟಿ ಅಥವಾ ಛಿbsಛಿiಣms.ಡಿಛಿiಟ.gov.iಟಿ/ಟಿvs ಗೆ ತಾ. ೩೧ ರೊಳಗೆ ಅರ್ಜಿ ಸಲ್ಲಿಸಬೇಕು. ಏಪ್ರಿಲ್ ೨೯ ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ ಅವರು, ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ಪ್ರೇರೆಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಜಿಲ್ಲೆಯಲ್ಲಿ ನವೋದಯ ಶಿಕ್ಷಣ ಸಂಸ್ಥೆ ಇದ್ದು, ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ, ಉಚಿತ ಶಿಕ್ಷಣ, ಊಟ, ವಸತಿ ನೀತಿಯ ಮೂಲಕ ವಿಶಾಲ ಸಂಸ್ಕೃತಿಯ ವಿನಿಮಯ, ಕ್ರೀಡೆಗೆ ಉತ್ತೇಜನ ಜೊತೆಗೆ ಎನ್.ಸಿ.ಸಿ., ಸ್ಕೌಟ್, ಗೈಡ್, ಹಾಗೂ ಎಸ್.ಪಿ.ಸಿ. ತರಬೇತಿಗೆ ಪೂರಕ ಅವಕಾಶಗಳಿವೆ ಎಂದು ಮಾಹಿತಿ ನೀಡಿದರು.
ನವೋದಯ ಪ್ರಾಂಶುಪಾಲ ಪಂಕಜಾಕ್ಷನ್ ಮಾತನಾಡಿ, ಕಳೆದ ಬಾರಿ ೧,೧೧೧ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊAಡಿದ್ದರು. ಈ ಬಾರಿ ಹೆಚ್ಚಾಗುವ ಸಾಧ್ಯತೆ ಇದೆ. ನೋಂದಣಿ ಆಧಾರದಲ್ಲಿ ಪರೀಕ್ಷಾ ಕೇಂದ್ರದ ಸಂಖ್ಯೆಯನ್ನು ನಿರ್ಧರಿಸ ಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್. ಮಂಜುನಾಥ್, ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ದಿವಾಕರ್ ಹಾಜರಿದ್ದರು.