ಮಡಿಕೇರಿ, ಜ. ೭: ಕೋವಿ ವಿನಾಯಿತಿ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ವೈ.ಕೆ. ಚೇತನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮತ್ತೆ ಮುಂದೂಡಲ್ಪಟ್ಟಿದೆ.
ತಾ. ೫ ರಂದು ಇದರ ವಿಚಾರಣೆ ನಿಗದಿಯಾಗಿತ್ತು. ಆದರೆ ವಿಚಾರಣೆಯನ್ನು ತಾ. ೨೨ಕ್ಕೆ ಮುಂದೂಡಲಾಗಿದ್ದು, ಆದಿನ ಸುಪ್ರೀಂ ಕೋರ್ಟ್ನ ರಿಜಿಸ್ಟಾçರ್ ಎದುರು ಬರಲಿದೆ ಎಂದು ತಿಳಿದು ಬಂದಿದೆ.