ಕೂಡಿಗೆ, ಜ. ೮: ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಎಂಬವರ ಪುತ್ರ ಕೀರ್ತನ್ (೧೨) ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಕೊಪ್ಪ ಭಾರತ ಮಾತಾ ಶಾಲಾ ವಿದ್ಯಾರ್ಥಿಯಾಗಿದ್ದ ಕೀರ್ತನ್ ಶನಿವಾರ ತಡರಾತ್ರಿ ಮಲಗಿದ್ದ ವೇಳೆ ಎರಡು ಬಾರಿ ಕಿರುಚಿಕೊಂಡಿದ್ದು ಪೋಷಕರು ಕುಶಾಲನಗರ ಆಸ್ಪತ್ರೆ ಕರೆದೊಯ್ಯುವ ವೇಳೆಗೆ ಬಾಲಕ ಮೃತಪಟ್ಟಿದ್ದಾನೆ. ಈತ ಓದುತ್ತಿದ್ದ ಶಾಲೆಯ ಬಸ್ ಚಾಲಕನಾಗಿ ಮಂಜಾಚಾರಿ ಕರ್ತವ್ಯ ನಿರ್ವಹಿಸುತ್ತಿದ್ದರು.