ಮಡಿಕೇರಿ, ಜ. ೭: ಕ್ರೆöÊಸ್ತ ಧರ್ಮದ ಕುರಿತಾದ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹಂಚುತ್ತಾ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುತ್ತಾ, ಆಮಿಷದ ಮೂಲಕ ಕ್ರೆöÊಸ್ತ ಧರ್ಮಕ್ಕೆ ಮತಾಂತರಗೊಳ್ಳುವAತೆ ಪ್ರೇರೇಪಿಸುತ್ತಿದ್ದ ಆರೋಪದಡಿ ಸರ್ಕಾರಿ ನೌಕರನೋರ್ವನನ್ನು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತರಬೇತಿ ಕೇಂದ್ರದ ಎಫ್‌ಡಿಎ ಆಗಿರುವ ಹೆಚ್.ಬಿ. ನಿಶಾಂತ್ ಎಂಬಾತ ಜಿ.ಟಿ. ವೃತ್ತದ ಬಳಿಯಿರುವ ಕುಶಾಲನಗರಕ್ಕೆ ತೆರಳುವ ಬಸ್ ನಿಲ್ದಾಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕ್ರೆöÊಸ್ತ ಧರ್ಮದ ಕುರಿತಾದ ಪುಸ್ತಕಗಳನ್ನು ಹಂಚುತ್ತಾ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುತ್ತಾ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಹಿಂ.ಜಾ.ವೇ ಕಾರ್ಯಕರ್ತರು ಹಿಡಿದು ಮಡಿಕೇರಿ ನಗರ ಠಾಣೆಗೊಪ್ಪಿಸಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ಪ್ರಚಾರ ಪ್ರಮುಖ್ ಕುಮಾರ್ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿದ ಪೊಲೀಸರು ನಿಶಾಂತ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.