ಮಡಿಕೇರಿ, ಜ. ೮: ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ರೈತರಿಗೆ ಬೆಳೆ ಪರಿಹಾರ ವಿತರಣೆ ಸಂಬAಧ ಹೆಚ್ಚುವರಿಯಾಗಿ ರೂ. ೬ ಕೋಟಿ ಬಿಡುಗಡೆಯಾಗಿದ್ದು, ಎರಡು-ಮೂರು ದಿನದಲ್ಲಿ ೨ ಸಾವಿರ ರೈತರಿಗೆ ಪರಿಹಾರ ಪಾವತಿಯಾಗಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.
ಒಟ್ಟಾರೆ ಇದುವರೆಗೆ ೪೫ ಸಾವಿರ ಕೃಷಿಕರಿಗೆ ರೂ. ೧೩೩ ಕೋಟಿ ಬೆಳೆ ಪರಿಹಾರ ವಿತರಿಸಲಾಗಿದೆ ಎಂದು ಬೋಪಯ್ಯ ಮಾಹಿತಿ ನೀಡಿದ್ದಾರೆ.