ಅಣ್ಣೀರ ಹರೀಶ್ ಮಾದಪ್ಪ
ಶ್ರೀಮಂಗಲ, ಜ. ೬ : ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸುಧಾರಣೆಗೆ ೬೬/೧೧ ಕೆ.ವಿ.ಯ ೧೨ ವಿದ್ಯುತ್ ಸರಬರಾಜು ಉಪಕೇಂದ್ರ ಮಂಜೂರಾಗಿದ್ದು, ಇದೀಗ ಹೊಸದಾಗಿ ಪೊನ್ನಂಪೇಟೆ ತಾಲೂಕಿನ ಹುದಿಕೇರಿಗೆ ಹೊಸ ಕೇಂದ್ರ ಮಂಜೂರಾತಿ ಆಗಿದೆ.
ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪ್ರತ್ಯೇಕ ೬೬ ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಈಗಾಗಲೇ ಗುರುತಿಸಲಾದ ಖಾಸಗಿ ಜಾಗವನ್ನು ಕೆಪಿಟಿಸಿಎಲ್ ಹೆಸರಿಗೆ ನೋಂದಾವಣಿ ಮಾಡಿಕೊಳ್ಳಲಾಗಿದೆ.
ಈಗಾಗಲೇ ಈ ವ್ಯಾಪ್ತಿಗೆ ಪೊನ್ನಂಪೇಟೆಯಿAದ ಶ್ರೀಮಂಗಲದವರೆಗೆ ೬೬/೧೧ ಕೆವಿ ವಿದ್ಯುತ್ ಮಾರ್ಗ ಹಾದುಹೋಗಿದ್ದು, ಶ್ರೀಮಂಗಲದಲ್ಲಿ ಈಗಾಗಲೇ ಇರುವ ೩೩ಕೆ.ವಿ.ವಿದ್ಯುತ್ ವಿತರಣಾ ಕೇಂದ್ರ ೬೬ ಕೆವಿ.ಗೆ ಮೇಲ್ದರ್ಜೆಗೇರಿಸುವ ವಿದ್ಯುತ್ ವಿತರಣಾ ಕೇಂದ್ರ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪೊನ್ನಂಪೇಟೆ-ಶ್ರೀಮAಗಲ ನಡುವೆ ಇರುವ ಹುದಿಕೇರಿ ಕೇಂದ್ರಕ್ಕೆ ಇದೇ ೬೬ ಕೆ.ವಿ.ಮಾರ್ಗದಿಂದ ಸಂಪರ್ಕ ನೀಡಲು ಯೋಜನೆ ರೂಪಿಸಲಾಗಿದೆ.
ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳಿಗೆ ಪೊನ್ನಂಪೇಟೆ ವಿದ್ಯುತ್ ವಿತರಣಾ ಕೇಂದ್ರದಿAದ ವಿದ್ಯುತ್ ವಿತರಣೆಯಾಗುತ್ತಿದೆ. ಆದರೆ ಬಹು ವರ್ಷದ ಬೇಡಿಕೆಯಂತೆ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ೬೬ ಕೆ ವಿ ವಿದ್ಯುತ್ ವಿತರಣಾ ಕೇಂದ್ರ ಹೊಸದಾಗಿ ಮಂಜೂರಾಗಿದ್ದು, ಇದರಿಂದ ಈ ವ್ಯಾಪ್ತಿಯ ಜನರಿಗೆ ಗುಣಮಟ್ಟದ ಹಾಗೂ ಅಡಚಣೆ ರಹಿತವಾದ ವಿದ್ಯುತ್ ದೊರೆಯುವ ವಿಶ್ವಾಸ ಮೂಡಿದೆ.
ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಜಾಗ
(ಮೊದಲ ಪುಟದಿಂದ) ಪ್ರಸ್ತುತ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ೪,೪೪,೦೯೮ ಮತದಾರರು ಇದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೨೫,೯೧೦ ಮತದಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨,೧೮,೧೮೮ ಮತದಾರರು ಇದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಕಾಲೇಜುಗಳಲ್ಲಿ ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೇ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ, ೧೮-೧೯ ವರ್ಷದ ಒಟ್ಟು ೩೭೪೭ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಲಾಗಿದೆ.
ಜಿಲ್ಲೆಯಲ್ಲಿರುವ ೨೫೦ ಹಾಡಿಗಳ ಪೈಕಿ ಜನವಸತಿ ಇರುವ ೭೬ ಹಾಡಿಗಳಲ್ಲಿ ವಾಸವಿರುವ ಜೇನುಕುರುಬ ಸಮುದಾಯ ಜನಾಂಗದವರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಸಹಯೋಗದೊಂದಿಗೆ ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿ, ತಂಡವು ಪ್ರತಿಯೊಂದು ಹಾಡಿಗಳಿಗೂ ಭೇಟಿ ನೀಡಿ, ಒಟ್ಟು ೧,೦೦೨ ಮತದಾರರನ್ನು ಗುರುತಿಸಿ, ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಲಾಗಿದೆ.
ಮತದಾರರ ಪಟ್ಟಿಗೆ ಸಂಬAಧಿಸಿದAತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ, ಉಪ ವಿಭಾಗಾಧಿಕಾರಿಗಳ ಮತ್ತು ತಹಶೀಲ್ದಾರರ ಕಚೇರಿಯನ್ನು ಸಂಪರ್ಕಿಸಬಹುದು ಹಾಗೂ ಮತದಾರರು hಣಣಠಿs://ತಿತಿತಿ.ಟಿvsಠಿ.iಟಿ, hಣಣಠಿs://voಣeಡಿಠಿoಡಿಣಚಿಟ.eಛಿi.gov.iಟಿ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಗಿಊಂ ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.