ವೀರಾಜಪೇಟೆ, ಜ. ೬: ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಟಿ.ಟಿ. ವಾಹನ ಬ್ರೇಕ್ ವಿಫಲಗೊಂಡು ಅಪಘಾತ ವಾಗಿರುವ ಘಟನೆ ರಾಜ್ಯ ಗಡಿ ಭಾಗವಾದ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ.
ಆAಧ್ರಪ್ರದೇಶ ರಾಜ್ಯ ಮೂಲದ ಶಭರಿಮಲೆ ಯಾತ್ರೆಗೆ ತೆರಳುತ್ತಿದ್ದ ವಾಹನ ವೀರಾಜಪೇಟೆ ರಾಜ್ಯ ಗಡಿ ಭಾಗವಾದ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ತಿರುವು ಒಂದರಲ್ಲಿ ಬ್ರೇಕ್ ವಿಫಲಗೊಂಡು ೨೦ ಅಡಿ ಪ್ರಪಾತಕ್ಕೆ ಇಳಿದು ಮರಕ್ಕೆ ಡಿಕ್ಕಿಯಾಗಿ ನಿಂತಿದೆ. ಮಾಕುಟ್ಟ ಪೊಲೀಸ್ ತಪಾಸಣೆ ಕೇಂದ್ರದಿAದ ಸುಮಾರು ೧.೫ ಕಿ.ಮೀ. ಅಂತರದಲ್ಲಿ ಯಾತ್ರಿಗಳ ವಾಹನವು ಅಪಘಾತಕ್ಕೀಡಾಗಿದೆ.
ವಾಹನದಲ್ಲಿ ೧೩ ಮಂದಿ ಆಂಧ್ರಪ್ರದೇಶದಿAದ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದರು. ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ಇರಿಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸ್ ತಪಾಸಣೆ ಕೇಂದ್ರದಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಗಳು, ಕೇರಳ ರಾಜ್ಯದ ಇರಿಟ್ಟಿ ವಿಭಾಗದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಹರಸಾಹಸದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾದರು.
-ಕಿಶೋರ್‌ಕುಮಾರ್ ಶೆಟ್ಟಿ