ವೀರಾಜಪೇಟೆ, ಜ. ೭: ಕರ್ನಾಟಕ ಪೌರ ಸುಧಾರಣೆಗಳ ಕೋಶದ ನಿರ್ದೇಶನದಂತೆ ವೀರಾಜಪೇಟೆ ಪುರಸಭೆ ವ್ಯಾಪ್ತಿಯೊಳಗೆ ಬರುವ ಪ್ರತಿ ವಾಸ, ವಾಣಿಜ್ಯ ಕೈಗಾರಿಕಾ ಕಟ್ಟಡ ಮತ್ತು ಖಾಲಿ ಜಾಗಗಳ ವಿವರವನ್ನು ತಂತ್ರಾAಶದಲ್ಲಿ ಅಳವಡಿಸಿ ಸಾರ್ವಜನಿಕರಿಗೆ ತಮ್ಮ ಮಾಲೀಕತ್ವದ ಸ್ವತ್ತಿನ ಇ-ಸ್ವತ್ತು, ಫಾರಂ ನಂ. ೩ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಅವಶ್ಯವಿರುವ ಮಾಹಿತಿಯ ದಾಖಲೆಗಳೊಂದಿಗೆ ಪರಿಶೀಲಿಸಿಕೊಂಡು ಆಸ್ತಿ ಕಣಜ ತಂತ್ರಾAಶದಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ.
ಪುರಸಭೆಯಿಂದ ಈ ಸರ್ವೆ ಕೆಲಸಕ್ಕೆ ಎಸ್.ಜಿಒ, ಏಜೆನ್ಸಿ ಮುಖಾಂತರ ನಿಯೋಜನೆಗೊಂಡ ತಾತ್ಕಾಲಿಕ ಹೊರಗುತ್ತಿಗೆ ನೌಕರ ಮತ್ತು ಪುರಸಭೆ ಸಿಬ್ಬಂದಿಗಳು ಪ್ರತಿ ವಾರ್ಡ್ನ ಪ್ರತಿ ಮನೆ, ಕಟ್ಟಡ, ಖಾಲಿ ಜಾಗಕ್ಕೆ ಸರ್ವೆಗೆ ಬರಲಿದ್ದು, ಇವರಿಗೆ ಆಸ್ತಿ ಮಾಹಿತಿ ಅನುಬಂಧ-೨ ರ ನಮೂನೆಯಲ್ಲಿ ಕೇಳಿರುವ ಮಾಹಿತಿಗಳನ್ನು ಮತ್ತು ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಪಡಿತರ ಚೀಟಿ, ಡ್ರೆöÊವಿಂಗ್ ಲೈಸನ್ಸ್, ಪಾಸ್ ಪೋರ್ಟ್ ಪ್ರತಿ ಇದರಲ್ಲಿ ಯಾವುದಾದರೊಂದು ಪ್ರತಿ ಕಟ್ಟಡ ಪರವಾನಿಗೆ ಪ್ರತಿ, ಕಟ್ಟಡ ಛಾಯಾಚಿತ್ರ, ಮಾಲೀಕರ ಪಾಸ್‌ಪೋರ್ಟ್ ಸೈಜ್ ಫೋಟೋ ಮಾಲೀಕತ್ವದ ದಾಖಲೆ ಪ್ರತಿ. ತೆರಿಗೆ ಪಾವತಿ ವಿವರಗಳು ಮತ್ತು ಸಂಬAಧಿಸಿದ ಇತರ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.