ಕುಶಾಲನಗರ, ಜ. ೭: ಎಸ್‌ಎನ್‌ಡಿಪಿ ಕುಶಾಲನಗರ ಶಾಖೆಯ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ಕೆ.ಟಿ. ಗಣೇಶ್ ಅಧ್ಯಕ್ಷತೆಯಲ್ಲಿ ಕುಶಾಲನಗರದಲ್ಲಿ ನಡೆಯಿತು. ಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಎಸ್‌ಎನ್‌ಡಿಪಿ ಕೊಡಗು ಯೂನಿಯನ್‌ನ ಕಾರ್ಯದರ್ಶಿ ಪ್ರೇಮಾನಂದ ಹಾಗೂ ಶಾಖೆಯ ಉಪಾಧ್ಯಕ್ಷರಾಗಿದ್ದ ಎಂ.ಆರ್. ಬಾಲಕೃಷ್ಣ, ಕಾರ್ಯದರ್ಶಿ ಕೆ.ಆರ್. ರಾಜೇಶ್, ಯೋಗಂ ಪ್ರತಿನಿಧಿಯಾದ ಟಿ.ವಿ. ಕಿಶೋರ್, ಯೂನಿಯನ್ ಪ್ರತಿನಿಧಿಯಾದ ಟಿ.ಎಸ್. ಉದಯಕುಮಾರ್ ಉಪಸ್ಥಿತರಿದ್ದರು, ಶಾಖೆಯ ಕಾರ್ಯದರ್ಶಿ ಕೆ.ಆರ್. ರಾಜೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸರ್ವ ಸದಸ್ಯರುಗಳ ಸಮ್ಮುಖದಲ್ಲಿ ಎಸ್‌ಎನ್‌ಡಿಪಿ ಕೊಡಗು ಯೂನಿಯನ್‌ನ ಕಾರ್ಯದರ್ಶಿಯಾದ ಪ್ರೇಮಾನಂದ ಅವರ ನೇತೃತ್ವದಲ್ಲಿ ಹೊಸ ಆಡಳಿತ ಮಂಡಳಿಯ ರಚನೆ ಮಾಡಲಾಯಿತು. ಶಾಖೆಯ ಅಧ್ಯಕ್ಷರಾಗಿ ಕೆ.ಟಿ. ಗಣೇಶ್, ಉಪಾಧ್ಯಕ್ಷರಾಗಿ ಎಂ.ಆರ್. ಬಾಲಕೃಷ್ಣ, ಕಾರ್ಯದರ್ಶಿಯಾಗಿ ಕೆ.ಆರ್. ರಾಜೇಶ್, ಯೋಗಂ ಪ್ರತಿನಿಧಿಯಾಗಿ ಟಿ.ವಿ. ಕಿಶೋರ್, ಯೂನಿಯನ್ ಪ್ರತಿನಿಧಿಯಾಗಿ ಟಿ.ಎಸ್. ಉದಯಕುಮಾರ್ ಆಯ್ಕೆಯಾದರು.

ಸದಸ್ಯರುಗಳಾಗಿ ರಾಬಿನ್ ಪಿ. ರಾಜೇಂದ್ರನ್, ಸಿ.ಕೆ. ಸುಕೇಶ್, ಮಣಿ ಹರೀಂದ್ರನ್ ಹಾಗೂ ನಿರ್ದೇಶಕರುಗಳಾಗಿ ಕೆ.ಎಂ. ಅನೀಶ್‌ಕುಮಾರ್, ಕೆ.ಕೆ. ವಿನು, ಕೆ.ಜಯರಾಮ್, ವಿ.ಕೆ. ದಾಸ್, ವಿ.ಕೆ. ದಿವಾಕರ, ಸಿ.ಎನ್. ಕರ್ಣನ್, ಟಿ.ಎಸ್. ಪ್ರಸಾದ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ಕೆ.ಎಂ. ಅನೀಶ್ ಕುಮಾರ್ ನಿರೂಪಿಸಿದರು, ಟಿ.ವಿ. ಕಿಶೋರ್ ವಂದಿಸಿದರು.