ಸುಂಟಿಕೊಪ್ಪ, ಜ. ೭: ಇಲ್ಲಿಗೆ ಸಮೀಪದ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರು ಗ್ರಾಮದಲ್ಲಿರುವ ವಿಕಾಸ್ ಜನಸೇವಾ ಟ್ರಸ್ಟ್ ಜೀವನ ದಾರಿ ಆಶ್ರಮದ ಅಧ್ಯಕ್ಷ ರಮೇಶ್ ಅವರು ಮಡಿಕೇರಿಯಲ್ಲಿ ನಿರಾಶ್ರಿತರಾಗಿ ಭಿಕ್ಷೆ ಬೇಡಿ ಅಲೆಯುತ್ತಾ ಅನಾರೋಗ್ಯದಿಂದ ಬಳಲುತ್ತಿದ್ದ ಗೋಪಿ, ಕಿರಣ್, ದಲಾಯಿ ಹಾಗೂ ಸರಸಮ್ಮ ಎಂಬ ನಾಲ್ಕು ಜನರನ್ನು ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ನಲ್ಲಿ ಬೆಂಗಳೂರಿನ ಈಸ್ಟ್ ಪಾಯಿಂಟ್ ವಿದ್ಯಾಸಂಸ್ಥೆಯ ವೈದ್ಯಕೀಯ ಕಾಲೇಜಿಗೆ ಕಳುಹಿಸಿದರು. ಈ ಮೂವರು ಗುಣಮುಖರಾಗಿ ಚೇತರಿಸಿಕೊಂಡ ನಂತರ ತೊಂಡೂರು ಗ್ರಾಮದಲ್ಲಿರುವ ವಿಕಾಸ್ ಜನಸೇವಾ ಟ್ರಸ್ಟ್ ಜೀವನ ದಾರಿ ಆಶ್ರಮದಲ್ಲಿ ಆಶ್ರಯ ನೀಡುವುದಾಗಿ ರಮೇಶ್ ಅವರು ತಿಳಿಸಿದರು. ಈ ಸಂದರ್ಭ ಆಶ್ರಮದ ಜಯಂತಿ, ಶಿವು ಹಾಗೂ ಪೊಲೀಸ್ ಇಲಾಖೆಯವರು ಹಾಜರಿದ್ದರು. ಇವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.