ನಾಪೋಕ್ಲು, ಜ. ೭: ಹಲವು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಗೆ ಸ್ಪಂದನ ಸಿಕ್ಕದೆ ನೆನೆಗುದಿಗೆ ಬಿದ್ದಿದ್ದ ಕೂರುಳಿ ರಸ್ತೆಯ ಕಾಮಗಾರಿ ಪ್ರಾರಂಭಗೊAಡಿದೆ. ಆದರೆ ಕಾಮಗಾರಿಯಲ್ಲಿ ಕೆಲವು ಲೋಪದೋಷಗಳಿದ್ದು ಗ್ರಾಮಸ್ಥರು ಅಸಮಾಧಾನಗೊಂಡಿದ್ದರು .

ಪಿ.ಎಂ.ಜಿಎಸ್.ವೈ ಯೋಜನೆಯಲ್ಲಿ ನಾಪೋಕ್ಲು ಮುಖ್ಯ ರಸ್ತೆಯ ಶಾಲಿಮಾರ್ ಮಿಲ್ ಬಳಿಯಿಂದ ಕೂರುಳಿವರೆಗಿನ ರೂ. ೨.೮೫ ಕೋಟಿ ವೆಚ್ಚದಲ್ಲಿ ೩ ಕಿಲೋಮೀಟರ್ ರಸ್ತೆ ನಿರ್ಮಾಣಗೊಂಡಿದ್ದು, ಇಂಜಿನಿಯರ್ ಅವರು ಗ್ರಾಮದವರೊಂದಿಗೆ ವೀಕ್ಷಣೆ ಮಾಡಿದರು, ಈ ಸಂದರ್ಭ ಪ್ರಮುಖರಾದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿ ರೂ. ೨.೮೫ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ನಿರ್ಮಾಣ ಹಂತದಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದು, ಅದನ್ನು ಸರಿಪಡಿಸುವ ಭರವಸೆಯನ್ನು ಇಂಜಿನಿಯರ್ ನೀಡಿದ್ದಾರೆ. ಸದ್ಯದಲ್ಲಿಯೇ ಉತ್ತಮ ರಸ್ತೆ ನಿರ್ಮಾಣಗೊಳ್ಳಲಿದೆ ಎಂದರು. ಈ ಸಂದರ್ಭ ಇಂಜಿನಿಯರ್ ಪ್ರಭು ತಿಮ್ಮಯ್ಯ, ಕಿರಿಯ ಅಭಿಯಂತರ ಪೂವಯ್ಯ, ಕಂಟ್ರಾಕ್ಟರ್ ಬಾಬು, ಗ್ರಾಮಸ್ಥರಾದ ಅಮ್ಮಂಡ ಮನು ಮಹೇಶ್, ಬಿ,ಎಂ. ಪ್ರತಿಪ, ಕಂಗAಡ ಜಾಲಿ ಪೂವಪ್ಪ, ಶಿವಚಾಳಿಯಂಡ ಪ್ರಸಾದ್ ತಿಮ್ಮಯ್ಯ, ಬೋಪ್ಪಂಡ ಕವನ ಕಾಳಪ್ಪ, ಬಿ. ದಿನೇಶ್ ಮತ್ತಿತರರು ಇದ್ದರು.