ಸೋಮವಾರಪೇಟೆ, ಜ. ೭: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ. ೯ ರಂದು (ನಾಳೆ) ಇತಿಹಾಸ ಸಂಘದ ಉದ್ಘಾಟನೆ, ರಾಷ್ಟಿçÃಯ ಯುವ ಸಪ್ತಾಹ ದಿನಾಚರಣೆ ಮತ್ತು ಯೋಧ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇತಿಹಾಸ ಸಂಘದ ಸಂಚಾಲಕ ಎಂ.ಎಸ್. ಸುನಿಲ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೧೧ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಹೆಚ್.ಎನ್. ರಾಜು ವಹಿಸಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್, ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹಮ್ಮದ್, ಕಾಲೇಜಿನ ಐಕ್ಯೂಎಸಿ ಸಂಚಾಲಕ ಎಂ.ಎಸ್. ಶಿವಮೂರ್ತಿ, ಇತಿಹಾಸ ಸಂಘದ ಅಧ್ಯಕ್ಷ ದಿಲೀಪ್, ಸುಂಟಿಕೊಪ್ಪದ ಶ್ರೀಶಾ ಅವರುಗಳು ಭಾಗವಹಿಸಲಿದ್ದಾರೆ.