ಮಡಿಕೇರಿ, ಜ. ೫: ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ತರಬೇತಿ ಕೇಂದ್ರವು ನಗರದ ಬಾಲಕಿಯರ ಕ್ರೀಡಾ ಹಾಸ್ಟೆಲ್ಗೆ ಪ್ರತಿಭಾವಂತ ಹಾಕಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ತಾ. ೧೨ ಮತ್ತು ೧೩ ರಂದು ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ.
೧೨ ರಿಂದ ೧೮ ವರ್ಷದ ಪ್ರಾಯದೊಳಗಿನ ಬಾಲಕಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ಕ್ರೀಡಾಪಟುಗಳು ತಮ್ಮ ವೈಯಕ್ತಿಕ ಕ್ರೀಡಾ ಸಾಮಗ್ರಿಗಳನ್ನು ತರತಕ್ಕದ್ದು. ದಾಖಲಾತಿಗಳ ಮೂಲ ಪ್ರತಿಯೊಂದಿಗೆ ಒಂದು ಸೆಟ್ ಜೆರಾಕ್ಸ್ ಪ್ರತಿ ತರಬೇಕು.
ವೈದ್ಯಕೀಯ ಅರ್ಹತಾ ಪತ್ರ ವೈದ್ಯಾಧಿಕಾರಿಯವರಿಂದ, ಕ್ರೀಡಾ ಸಾಧನೆಯ ಸರ್ಟಿಫಿಕೇಟ್. (ಜಿಲ್ಲಾ, ವಿಭಾಗ, ರಾಜ್ಯ, ಹಾಗೂ ಅದಕ್ಕಿಂತ ಮೇಲ್ಪಟ್ಟ ೩ ವರ್ಷದ ಹಿಂದಿನ ಸ್ಫರ್ಧೆಯಲ್ಲಿ ಭಾಗವಹಿಸಿದ್ದು), ಜನ್ಮ ದಿನಾಂಕ ಪ್ರಮಾಣ ಪತ್ರ (ಜನನ ಮರಣ ನೋಂದಣಿ ಅಧಿಕಾರಿ ಗಳಿಂದ), ಇತ್ತೀಚಿನ ೫ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ. ವಿಳಾಸ ದೃಢೀಕರಣಗೊಳಿಸಲು ಆಧಾರ್ ಕಾರ್ಡ್ ಸಲ್ಲಿಸಬೇಕು.
ಈ ಆಯ್ಕೆ ಪ್ರಕ್ರಿಯೆಯನ್ನು ಹಿಂದಿನ ೩ ವರ್ಷದ ಹಾಕಿ ಕ್ರೀಡಾ ಸಾಧನೆಯ ಪ್ರಮಾಣ ಪತ್ರ ಹಾಗೂ ಕೆಲವೊಂದು ಸಾಯಿ ನಿಗದಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾ ಪಟುಗಳಿಗೆ ತುಟ್ಟಿಭತ್ಯೆ ಮತ್ತು ಪ್ರಯಾಣ ದರ ನೀಡಲಾಗುವುದಿಲ್ಲ.
ಆಯ್ಕೆಯಾದಂತಹ ಕ್ರೀಡಾ ಪಟುಗಳಿಗೆ ವಸತಿ, ಊಟ, ಕ್ರೀಡಾ ಸಾಮಾಗ್ರಿ, ವೈದ್ಯಕೀಯ ಖರ್ಚು, ಶೈಕ್ಷಣಿಕ ಸೌಲಭ್ಯವನ್ನು ಉಚಿತವಾಗಿ ಸಾಯಿ ತರಬೇತಿ ಕೇಂದ್ರದಿAದ ಕೊಡಲಾಗುತ್ತದೆ ಎಂದು ಸಾಯಿ ತರಬೇತಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉಣ್ಣಿರಾಜ್ ತಿಳಿಸಿದ್ದಾರೆ.