ಕುಶಾಲನಗರ, ಜ. ೫: ಹಾವೇರಿಯಲ್ಲಿ ನಡೆಯಲಿರುವ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯಿಂದ ಕವಿಗೋಷ್ಠಿಗೆ ಆಯ್ಕೆಯಾಗಿರುವ ಹಿರಿಯ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಅವರನ್ನು ಕುಶಾಲನಗರ ತಾಲೂಕು ಜಾನಪದ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಅಧ್ಯಕ್ಷ ಎಂ.ಎನ್ ಚಂದ್ರಮೋಹನ್ ನೇತೃತ್ವದಲ್ಲಿ ಜಯಪ್ರಕಾಶ್ ಅವರ ನಿವಾಸಕ್ಕೆ ತೆರಳಿ ಶುಭ ಕೋರ ಲಾಯಿತು.
ಈ ಸಂದರ್ಭ ಪರಿಷತ್ ಗೌರವಾಧ್ಯಕ್ಷರಾದ ಫ್ಯಾನ್ಸಿ ಮುತ್ತಣ್ಣ, ಮುಂಡುವAಡ ಜೋಯಪ್ಪ, ಭರಮಣ್ಣ, ಸಲಹೆಗಾರ ಹೆಚ್.ವಿ. ಶಿವಪ್ಪ, ಕೊಡವ ಸಮಾಜದ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಉದ್ಯಮಿ ಕೆ.ಎಸ್. ನಾಗೇಶ್, ಬಳಗದ ಪ್ರಮುಖರು ಇದ್ದರು.