ಸಿದ್ದಾಪುರ, ಜ. ೫: ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಅಪಘಾತವಾಗಿ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ಗುರುವಾರ ಸಂಜೆ ನಡೆದಿದೆ.
ವೀರಾಜಪೇಟೆಯಿಂದ ಸಿದ್ದಾಪುರ ಮಾರ್ಗವಾಗಿ ಮಾಲ್ದಾರೆಯತ್ತ ತೆರಳುತ್ತಿದ್ದ ಟಿಪ್ಪರ್ ಹಾಗೂ ಮಾಲ್ದಾರೆಯಿಂದ ಸುಂಟಿಕೊಪ್ಪದತ್ತ ತೆರಳುತ್ತಿದ್ದ ಸ್ಕೂಟಿ ನಡುವೆ ಸಿದ್ದಾಪುರ ಮೈಸೂರು ರಸ್ತೆ ಕ್ರೆöÊಸ್ತ ರುದ್ರಭೂಮಿಯ ಸಮೀಪದಲ್ಲಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಸ್ಕೂಟಿ ಚಾಲನೆ ಮಾಡುತ್ತಿದ್ದ ಸುಂಟಿಕೊಪ್ಪದ ನಿವಾಸಿ ನವೀನ್ ಎಂಬವರ ಮುಖಕ್ಕೆ ಹಾಗೂ ತಲೆಗೆ ಗಂಭೀರವಾದ ಗಾಯವಾಗಿದೆ. ಹಿಂಬದಿಯ ಸವಾರ ಉದಯ ಎಂಬವರಿಗೂ ಗಾಯವಾಗಿದೆ. ಗಂಭೀರ ಗಾಯವಾಗಿರುವ ಸ್ಕೂಟಿ ಸವಾರನನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಟಿಪ್ಪರ್ ಲಾರಿ (ಎಪಿ ೦೪ ೭ಎಕ್ಸ್ ೩೭೦೪) ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ (ಕೆಎ ೫೧ ಇಜಿ ೮೩೫೩) ಜಖಂಗೊAಡಿದೆ.
ಘಟನಾ ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಮುಖ್ಯ ಪೇದೆಗಳಾದ ಸಂತೋಷ್ ಹಾಗೂ ತೇಜಾವತಿ ಭೇಟಿ ನೀಡಿ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.