ಕೊಡ್ಲಿಪೇಟೆ, ಜ. ೫: ವಿಧಾನ ಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ವಿ.ಅನ್ಬುಕುಮಾರ್ ಅವರು ಕೊಡ್ಲಿಪೇಟೆ ಹೋಬಳಿಯ ಮತಗಟ್ಟೆ ಸಂಖ್ಯೆ ೨೯, ೩೦, ೩೧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇದರೊಂದಿಗೆ ಈ ಮತಗಟ್ಟೆಗಳ ಬಿಎಲ್‌ಒ ಅವರಿಂದ ಒಟ್ಟು ಮತದಾರರ ವಿವರ, ಹೊಸದಾಗಿ ಯುವ ಮತದಾರರ ಸೇರ್ಪಡೆ, ನಮೂನೆ ೭ ರಂತೆ ತೆಗೆದಿರುವ ಮತದಾರರ ಸಂಖ್ಯೆ ಮತ್ತು ಯಾವ ಕಾರಣಕ್ಕೆ ತೆಗೆದಿರುವುದು ಹಾಗೂ ಸ್ಥಳಾಂತರ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನರಗುಂದ, ಕಂದಾಯ ಪರಿವೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ ಬಿಎಲ್‌ಒಗಳು ಇತರರು ಹಾಜರಿದ್ದರು.