ಸುಂಟಿಕೊಪ್ಪ, ಜ. ೫: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ ಮಾದರಿ ತಯಾರಿಕೆ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಯಿತು. ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ವಿಜ್ಞಾನ ಮಾದರಿ ವಸ್ತುಗಳ ತಯಾರಿಕೆ ಪ್ರದರ್ಶನವನ್ನು ಸಂತ ಕ್ಲಾರ ಕಾನ್ವೆಂಟಿನ ಸಿಸ್ಟರ್ ನಿರ್ಮಲ, ಸಂತ ಅಂತೋಣಿ ಶಾಲೆಯ ಸಹಶಿಕ್ಷಕಿ ಯಿವಾಬೆನ್ಸಿಸ್ ಹಾಗೂ ಪ್ರೀತಿ ಅವರುಗಳು ಉದ್ಘಾಟಿಸಿದರು.

ಮಕ್ಕಳಿಗೆ ವಿಜ್ಞಾನದ ಕುರಿತು ಆರಿವು ಮೂಡಿಸುವ ಮತ್ತು ಜ್ಞಾನವನ್ನು ವೃದ್ಧಿಸುವ ದಿಸೆಯಲ್ಲಿ ಮಕ್ಕಳೇ ತಯಾರಿಸಿರುವ ವಿಜ್ಞಾನ ಮಾದರಿಗಳನ್ನು ಅದರ ಬಗ್ಗೆ ಮಾಹಿತಿಯನ್ನು ಒದಗಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶಾಲೆಯ ವಿದ್ಯಾರ್ಥಿಗಳು ಹುರುಪಿನಿಂದ ವಿಜ್ಞಾನದ ಮಾದರಿಗಳನ್ನು ಹನಿ ನೀರು, ವಿದ್ಯುತ್ ತಯಾರಿಕ ಸ್ಥಾವರಗಳು, ಕೃಷಿ, ಆರೋಗ್ಯಕ್ಕೆ, ಹವಾಮಾನ ಸಂಬAಧಿಸಿದ ಮಾದರಿಗಳನ್ನು ತಯಾರಿಸಿ ತಂದಿದ್ದು, ಇದರಿಂದ ಭೂಮಿಗೆ ದೊರಕುವ ಪ್ರಯೋಜನಗಳ ಬಗ್ಗೆ ವಿವರಣೆಯನ್ನು ನೀಡುವ ಮೂಲಕ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿ ಮಾಹಿತಿ ನೀಡಿದರು.