ಸುಂಟಿಕೊಪ್ಪ, ಜ. ೫: ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‌ನ ೨೦೨೩-೨೪ನೇ ಸಾಲಿನ ಅಧ್ಯಕ್ಷರಾಗಿ ೨ನೇ ಬಾರಿಗೆ ಅಂಬೆಕಲ್ ಚಂದ್ರ ಶೇಖರ್ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ಉಪಾಧ್ಯಕ್ಷ ರಾಗಿ ಎ.ಆರ್. ಗೋಪಾಲ್, ಪ್ರಧಾನ ಕಾರ್ಯದರ್ಶಿ ಯಾಗಿ ಶಂಕರ ನಾರಾಯಣ, ಖಜಾಂಚಿಯಾಗಿ ಕೆ.ಎಸ್. ವಿನೋದ್, ಸಹ ಕಾರ್ಯದರ್ಶಿಯಾಗಿ ಬಿ.ಎ. ವಸಂತ, ಕ್ರೀಡಾ ಕಾರ್ಯದರ್ಶಿಯಾಗಿ ಕೆ.ಜೆ. ಜಗದೀಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪಿ.ಎಂ. ರವಿ, ಪ್ರವೀಣ ಸಿ.ಬಿ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ೧೨ ಮಂದಿ ಸದಸ್ಯರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.