ಕೂಡಿಗೆ, ಜ. ೫: ಇಲ್ಲಿಗೆ ಸಮೀಪದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವು ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜೆ. ಗೀತಾ ನೆರವೇರಿಸಿದರು. ಸಮಾರೋಪ ಭಾಷಣವನ್ನು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಮಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ. ಪುಟ್ಟರಾಜು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ೭ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಎನ್.ಆರ್. ರಘು, ಕಾಲೇಜು ಅಭಿವೃದ್ಧಿ ಸಮಿತಿಯ ಖಜಾಂಚಿ ಎನ್.ಸಿ. ಶ್ರೀಧರ್, ಸಿ.ಎನ್. ಲೋಕೇಶ್, ಎಸ್.ಎಲ್. ತಮ್ಮಯ್ಯ, ಎಸ್.ಎಸ್. ಕೃಷ್ಣ, ಎಸ್.ಎಸ್. ಮಹೇಶ್, ಎಸ್.ಯು. ವೀರಭದ್ರಪ್ಪ, ಎಂ.ಪಿ. ಸುರೇಶ್, ಪ್ರಾಂಶುಪಾಲೆ ಶ್ರೀಲತಾ ಎ.ಎಸ್. ಮೊದಲಾ ದವರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎನ್.ಬಿ. ಮಹೇಶ್ ವಹಿಸಿದ್ದರು. ಹಂಡ್ರAಗಿ ನಾಗರಾಜ್ ಸ್ವಾಗತಿಸಿ, ಹಿರಿಯ ಶಿಕ್ಷಕ ಆರ್.ಡಿ. ಲೋಕೇಶ್ ವಂದಿಸಿದರು. ಕಾರ್ಯ ಕ್ರಮವನ್ನು ಹೆಚ್.ಆರ್. ಶಿವ ಕುಮಾರ್ ಮತ್ತು ಕವಿತಾ ನಿರೂಪಿ ಸಿದರು. ಸಾಂ ಸ್ಕೃತಿಕ ಕಾರ್ಯಕ್ರಮ ನಡೆಸ ಲಾಯಿತು. ಕಾಲೇಜು ಉಪನ್ಯಾಸಕರು ಮತ್ತು ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.