ಸೋಮವಾರಪೇಟೆ, ಜ. ೫: ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಸಭೆ ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಹೆಚ್.ಬಿ. ರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಹಾನಗಲ್ಲು ವಲಯ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸಿದ್ಧಾರ್ಥ ಬಡಾವಣೆಯ ಹೆಚ್.ಈ. ಸುಬ್ಬಯ್ಯ, ಕಾರ್ಯದರ್ಶಿಯಾಗಿ ಹೆಚ್.ಹೆಚ್. ಶಶಿಕುಮಾರ್ ಹಾಗೂ ಖಜಾಂಚಿಯಾಗಿ ಹೆಚ್.ಎಂ. ರವಿ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಹೆಚ್.ಪಿ. ಪುಟ್ಟಯ್ಯ, ಹೆಚ್.ಪಿ. ಮಾದಪ್ಪ, ಹೆಚ್.ಜೆ. ರಾಮು, ಹೆಚ್.ಕೆ. ವಿಜಯ, ಹೆಚ್.ಪಿ, ಜೀವನ್, ಹೆಚ್.ಎಂ. ರಕ್ಷಿತ್, ಹೆಚ್.ಕೆ. ರಾಜೇಂದ್ರ, ಹೆಚ್.ಪಿ. ಪುಟ್ಟಸ್ವಾಮಿ, ಹೆಚ್.ಪಿ. ಕಾಳಪ್ಪ ಹಾಗೂ ಹೆಚ್.ಬಿ. ಮಂಜುನಾಥ್ ನೇಮಕವಾದರು.