ಗೋಣಿಕೊಪ್ಪ ವರದಿ, ಜ. ೫: ಮುಳಿಯ ಜ್ಯುವೆಲ್ಸ್ನಲ್ಲಿ ಕೊಡಗಿನ ಸಾಂಪ್ರದಾಯಿಕ ಆಭರಣಗಳ ಹಬ್ಬಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಸ್ಥಳೀಯ ಪ್ರಸೂತಿ ತಜ್ಞೆ ಡಾ. ಕವಿತಾ ಬೋಪಣ್ಣ ಉದ್ಘಾಟಿಸಿ ಶುಭ ಕೋರಿದರು. ಈ ಸಂದರ್ಭ ಆಭರಣಗಳ ಪ್ರದರ್ಶನ ನಡೆಯಿತು.
ಶಾಖಾ ಪ್ರಬಂಧಕ ಬಿ.ಎಸ್. ಕಿಶೋರ್ ಮಾತನಾಡಿ, ಹಬ್ಬದಲ್ಲಿ ಕೊಡಗಿನ ಆಭರಣಗಳ ಅಪರಿಮಿತ ಅನನ್ಯ ಆಯ್ಕೆಗಳು ಗ್ರಾಹಕರಿಗೆ ದೊರೆಯಲಿದೆ. ಇದರೊಂದಿಗೆ ಆಭರಣಗಳಲ್ಲಿ ವ್ಯಾಕ್ಸ್ ಪ್ರಮಾಣದ ತೂಕವನ್ನು ಗ್ರಾಹಕರ ಎದುರು ಪರಿಶೀಲಿಸುವ ವಿಧಾನವನ್ನು ಪರಿಚಯಿಸಲಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಪೊನ್ನAಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಗುಣಮಟ್ಟದೊಂದಿಗೆ ನಂಬಿಕೆ ಉಳಿಸಿಕೊಳ್ಳುವ ವ್ಯವಹಾರ ಸಮಾಜ ಹೆಚ್ಚು ಬಯಸುತ್ತದೆ ಎಂದರು.