ಮಡಿಕೇರಿ, ಜ. ೪: ಕೊಡಗು ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಕರ್ಯಗಳಿಗೆ ಸಂಬAಧಿಸಿದAತೆ ತನ್ನ ಅಧಿಕಾರವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ ತೃಪ್ತಿಯಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ನಡೆದÀ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಮಡಿಕೇರಿ, ಗೋಣಿಕೊಪ್ಪಲು ಮತ್ತು ಸೋಮವಾರಪೇಟೆಗಳಲ್ಲಿ ಮಾತ್ರ ಪದವಿ ಕಾಲೇಜುಗಳಿದ್ದವು. ತಾನು ಅಧಿಕಾರದಲ್ಲಿ ಇದ್ದ ಸಂದರ್ಭ, ಡಿ.ಹೆಚ್. ಶಂಕರಮೂರ್ತಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ೧೬೨ ಪ್ರಥಮ ದರ್ಜೆ ಕಾಲೇಜುಗಳನ್ನು ರಾಜ್ಯದ ವಿವಿಧೆಡೆ ಆರಂಭಿಸಲಾಯಿತು. ಅದರ ಫಲವಾಗಿ ನಾಪೋಕ್ಲು, ವೀರಾಜಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿ ಗಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲತೆ ದೊರಕಿತೆಂದು ಹೇಳಿದರು.
ಭಾರತದ ಮೊದಲ ಮಹಾದಂಡನಾಯಕರಾದ ಫೀ.ಮಾ.ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ನಾಡಾದ ಕೊಡಗು ಜಿಲ್ಲೆಯಲ್ಲಿ ‘ಸೈನಿಕ ಶಾಲೆ’ ಆರಂಭವಾಗಬೇಕೆನ್ನುವ ಚಿಂತನೆಯಡಿ ತಾನು ನಡೆಸಿದ ಪ್ರಯತ್ನದಿಂದ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀÀಸ್ ಅವರು ಜಿಲ್ಲೆಗೆ ಸೈನಿಕ ಶಾಲೆಯನ್ನು ಮಂಜೂರು ಮಾಡಿದರು. ಇದರ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ೫ ಕೊಟಿ ರೂ.ಗಳನ್ನು ಒದಗಿಸಿದ್ದರು. ಬಳಿಕ ೪೫ ಕೋಟಿ ರೂ. ವೆಚ್ಚದಲ್ಲಿ ಸೈನಿಕ ಶಾಲೆ ತಲೆ ಎತ್ತಿತು. ಡಿ.ಹೆಚ್. ಶಂಕರಮೂರ್ತಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಅವರಿಗೆ ಮನವಿ ಮಾಡಿಕೊಂಡ ಮೇರೆ, ಕುಶಾಲನಗರದಲ್ಲಿ ಪಾಲಿಟೆಕ್ನಿಕ್ ಕಾಲೇಜನ್ನು ಉಳಿಸಿಕೊಂಡು, ನೂತನ ಇಂಜಿನಿಯರ್ ಕಾಲೇಜು ಆರಂಭವಾಗಲು ಸಾಧ್ಯವಾಯಿತೆಂದು ಹೇಳಿದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುಮತಿ ದೊರಕಿ, ಕಾಲೇಜು ಆರಂಭವಾಯಿತು. ಇತ್ತೀಚೆಗೆ ಚಿಕ್ಕಳುವಾರದ ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರವನ್ನು ಕೊಡಗು ವಿಶ್ವವಿದ್ಯಾನಿಲಯವನ್ನಾಗಿ ಮಾಡಲಾಗಿದೆ. ಈ ಎಲ್ಲಾ ಶಿಕ್ಷಣಕ್ಕೆ ಪೂರಕವಾದ ಕಾರ್ಯಗಳಿಂದ ಜಿಲ್ಲೆಯ ಯುವ ಸಮೂಹ ಉನ್ನತ ಶಿಕ್ಷಣಕ್ಕಾಗಿ ಹೊರ ಜಿಲ್ಲೆಗಳ ಬದಲಾಗಿ, ಜಿಲ್ಲೆಯಲ್ಲೆ ಅದನ್ನು ಪಡೆಯಲು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇವುಗಳ ಜೊತೆಯಲ್ಲೆ ಜಿಲ್ಲೆಯಲ್ಲಿ ೫ ಮೊರಾರ್ಜಿ ವಸತಿ ಶಾಲೆಗಳನ್ನು ಆರಂಭಿಸಲಾಗಿದ್ದು, ತನ್ನ ಅಧಿಕಾರದ ಅವಧಿಯುದ್ದಕ್ಕೂ ಶಿಕ್ಷಣಕ್ಕೆ ಒತ್ತು ನೀಡುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಲೆ ಬಂದಿರುವುದಾಗಿ ಹೇಳಿದರು. ಜಿಲ್ಲೆಯ ಗಾಮೀಣ ಭಾಗಗಳಲ್ಲಿ ಸರ್ವಋತು ರÀಸ್ತೆಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರತಿ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ಯೋಜನೆ ಜಾರಿಗೆ ಬಂದಿದ್ದು, ಇಂದು ಜಿಲ್ಲೆಯ ಗರ್ವಾಲೆ, ಸೂರ್ಲಬ್ಬಿ ಯಂತಹ ಗ್ರಾಮೀಣ ಭಾಗದ ಕಾಲೋನಿಗಳು ಕಾಂಕ್ರಿಟ್ ರಸ್ತೆಯ ಸಂಪರ್ಕ ಪಡೆದುಕೊಂಡಿವೆ ಎಂದರು. ಪ್ರಸ್ತುತÀ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ೫೦ ಕೋಟಿ ರೂ. ಅನುದಾನವನ್ನು ವಿನಿಯೋಗಿಸ ಲಾಗುತ್ತಿದೆಯೆಂದು ಮಾಹಿತಿ ನೀಡಿದರು.
(ಮೊದಲ ಪುಟದಿಂದ) ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳ ನಡುವೆಯೂ ರಸ್ತೆಗಳ ಬೇಡಿಕೆಯ ಕೂಗು ಇನ್ನೂ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಳೆದ ೨೦೧೮ ರ ಪ್ರಾಕೃತಿಕ ವಿಕೋಪ ಮತ್ತು ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಆ ಅವಧಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆ ಕಡಿಮೆಯಾಗಿತ್ತು. ಈ ಹಿನ್ನೆಲೆ ಕೆಲಸಗಳು ವಿಳಂಬವಾಗಿದ್ದವು. ಪ್ರಸ್ತುತ ಎಲ್ಲಾ ರಸ್ತೆ ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ. ಇದರ ನಡುವೆ ಕ್ರಷರ್ಗಳ ಮುಷ್ಕರ ಒಂದಷ್ಟು ಸಮಸ್ಯೆ ಹುಟ್ಟು ಹಾಕಿದೆಯೆಂದು ತಿಳಿಸಿ, ಕ್ರಷರ್ಗಳ ಮುಷ್ಕರವನ್ನು ಕೈಬಿಡುವಂತೆ ಸಂಬAಧಿಸಿದವರ ಬಳಿ ಮನವಿ ಮಾಡಿದ್ದೇನೆ ಎಂದರು.
ಅತಿವೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲೆಯ ೫೦ ಸಾವಿರ ಬೆಳೆಗಾರರಿಗೆ ೧೨೫ ಕೊಟಿ ರೂ. ಪರಿಹಾರ ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗಿದೆ.
ಮಡಿಕೆೆÃರಿ ಜಿಲ್ಲಾಧಿಕಾರಿಗಳ ಭವನದ ೮ ಕೋಟಿ ವೆಚ್ಚದ ತಡೆಗೋಡೆÉಯ ನಿರ್ಮಾಣದ ಸಂದರ್ಭ, ನೂತನ ವಿನ್ಯಾಸದ ತಡೆಗೋಡೆ ಇಲ್ಲಿಯ ವಾತಾವರಣಕ್ಕೆ ಸರಿ ಹೊಂದುವುದಿಲ್ಲವೆAದು ಪದೇ ಪದೇ ಹೇಳುತ್ತಾ ಬಂದವನು ತಾನೆಂದು ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದರು. ಇದೀಗ ಬದಲಿ ಕಾಮಗಾರಿ ಹಿಂದಿನ ಮೊತ್ತದಲ್ಲೆ ನಡೆಯಬೇಕೆಂದು ಅಭಿಪ್ರಾಯಿಸಿದರು.
ಕೊಡಗು ಹೆರಿಟೇಜ್ ಸೆಂಟರ್ ನಿರ್ಮಾಣ ಕಾಮಗಾರಿ ಕಳೆದ ೧೩ ವರ್ಷಗಳಿಂದ ಕುಂಟುತ್ತಾ ಸಾಗಿರುವ ವಿಚಾರವನ್ನು ಪ್ರಸ್ತಾಪಿಸಿ, ೨.೭೩ ಕೋಟಿ ಮೊತ್ತಕ್ಕೆ ಬಿಲ್ ಆಗಿದ್ದರು ಕಾಮಗಾರಿ ಪೂರ್ಣವಾಗದೆ ಇರುವ ಹಿನ್ನೆಲೆ, ಈ ಕಾಮಗಾರಿಯ ಗುತ್ತಿಗೆದಾರನನ್ನು ‘ಕಪ್ಪು ಪಟ್ಟಿಗೆ’ ಸೇರಿಸಿರುವುದಾಗಿ ಶಾಸಕರು ಸ್ಪಷ್ಟಪಡಿಸಿದರು.
ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಸಮೀಪದಲ್ಲೆ ನಿರ್ಮಾಣವಾಗುತ್ತಿರುವ ನೂತನ ಆಸ್ಪತ್ರೆ ಕಟ್ಟಡ ಫೆಬ್ರವರಿಯಲ್ಲಿ ಮುಖ್ಯಮಂತ್ರಿಗಳಿAದ ಉದ್ಘಾಟನೆಯಾಗಲಿದೆ ಎನ್ನುವ ವಿಶ್ವಾಸವನ್ನು ಇದೇ ಸಂದರ್ಭ ವ್ಯಕ್ತಪಡಿಸಿದರು.
ಮಡಿಕೆÉÃರಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಕೂಗಿದೆ. ಇದಕ್ಕೆ ಸಂಬAಧಪಟ್ಟ ಕಡತಗಳನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತಂದಿರುವುದಾಗಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಮುಂಬರುವ ದಿನಗಳಲ್ಲಿ ಕೂಡಿಗೆಯ ಸೈನಿಕ ಶಾಲೆಯ ಬಳಿ ‘ಏರ್ ಸ್ಟಿçಪ್’ ನಿರ್ಮಾಣ ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಇರುವುದಾಗಿ ಶಾಸಕರು ತಿಳಿಸಿದರು
ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಶಾಸಕರ ಗಮನ ಸೆಳೆÉದಾಗ, ಈ ಹಿಂದಿನಿAದಲು ತಾನು ಪ್ರಾಯೋಗಿಕವಾಗಿ ೨ ಸಾವಿರ ಎಕರೆಯಷ್ಟು ತೇಗದ ಅರಣ್ಯದಲ್ಲಿ ಹಲಸು, ಬಿದಿರು ಸೇರಿದಂತೆ ವನ್ಯ ಜೀವಿಗಳಿಗೆ ಆಹಾರ ಒದಗಿಸುವ ಸಸ್ಯ ಸಂಪತ್ತನ್ನು ಅಭಿವೃದ್ಧಿಪಡಿಸಿದಲ್ಲಿ ಕಾಡಾನೆಗಳ ಹಾವಳಿ ಇರುವುದಿಲ್ಲವೆಂದು ಸಲಹೆ ನೀಡುತ್ತಾ ಬಂದಿದ್ದೇನಾದರು, ಆ ಬಗ್ಗೆ ಅರಣ್ಯ ಇಲಾಖೆ ಆಸಕ್ತವಾಗಿಲ್ಲವೆಂದು ಬೇಸರ ವ್ಯಕ್ತÀಪಡಿಸಿದರು.
ಕಾಡಾನೆ ಹಾವಳಿ ನಿಯಂತ್ರಣಕ್ಕೆ ೧೦೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಒದಗಿಸಲಾಗಿದ್ದು, ಇದರ ಮೂಲಕ ಕಂದಕ, ರೈಲ್ವೆ ಹಳಿಗಳ ಬೇಲಿ ನಿರ್ಮಾಣವಾಗಲಿದ್ದು, ಮಂದಿನ ಎರಡು ವರ್ಷಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದ ೨ ಸಾವಿರ ಹೆಕ್ಟೇರ್ ಸಿ ಮತ್ತು ಡಿ ಭೂಮಿಯನ್ನು ಹಿಂದಕ್ಕೆ ಪಡೆಯುವ ಕೆಲಸವಾಗಿದ್ದು. ಲಭ್ಯ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಕಾರ್ಯ ನಡೆಯಲಿದೆ. ಈಗಾಗÀಲೆ ಜಿಲ್ಲಾಧಿಕಾರಿಗಳು ನಿವೇಶನಗಳನ್ನು ಒದಗಿಸಲು ಜಾಗವನ್ನು ಗುರುತು ಮಾಡಿರುವುದಾಗಿ ತಿಳಿಸಿದರು.
ಮಾಜಿ ಸೈನಿಕರ ನಿವೇಶನದ ಬೇಡಿಕೆಯನ್ನು ಪ್ರಸ್ತಾಪಿಸಿದಾಗ ಶಾಸಕರು, ಸರ್ಕಾರ ಮಾಜಿ ಸೈನಿಕರಿಗೆ ಹತ್ತು ಹಲವಾರು ಸೌಲಭ್ಯಗಳನ್ನು ಈಗಾಗಲೆ ನೀಡಿದೆ. ಅಗತ್ಯ ಜಾಗ ಮತ್ತು ನಿವೇಶನ ಇರುವವರು ನಿವೇಶನ ಪಡೆಯಲು ಮುಂದಾದಲ್ಲಿ ಅದನ್ನು ಕೊಡುವುದು ಕಷ್ಟವೆಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಈ ಬಾರಿ ಪ್ರತಿ ನಾಗರಿಕನಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಬಾಬು ಜಗಜೀವನ ರಾಂ ಕುಡಿಯುವ ನೀರಿನ ಯೋಜನೆಯಡಿ ೩೦೦ ಕೋಟಿ ರೂ.ಗಳನ್ನು ಕೊಡಗಿಗೆ ಒದಗಿಸಿದೆ ಎಂದರು.
ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಸಾಕಷ್ಟು ಮಂದಿಗೆ ಉದ್ಯೋಗಾವಕಾಶಗಳು ದೊರಕುತ್ತಿದ್ದು, ಬದುಕಿನ ಮಟ್ಟವೂ ಉತ್ತಮವಾಗಿದೆ. ಜಿಲ್ಲೆಯಲ್ಲಿನ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರವಾಸಿ ಸ್ಥಳಗಳ ಸಮಗ್ರ ಮಾಹಿತಿ ಒದಗಿಸುವ ‘ಔಟ್ ಲೆಟ್’ ಆರಂಭಿಸುವ ಉದ್ದೇಶವಿದೆ. ಪ್ರವಾಸೋದ್ಯಮದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯೂ ಗಂಭೀರವಾಗಿದ್ದು, ಈ ಬಗ್ಗೆ ಪ್ರವಾಸಿಗರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ ಎಂದರು.
ಕೊಡಗು ಜಿಲ್ಲೆಗೆ ಕಳೆÉದ ಐದು ವರ್ಷಗಳ ಅವಧಿಯಲ್ಲಿ ೨ ಸಾವಿರ ಕೋಟಿ ಅನುದಾನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗಿದೆ. ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅಪ್ಪಚ್ಚು ರಂಜನ್ ಇದೇ ಸಂದರ್ಭ ತಿಳಿಸಿದರು.
ಜನರ ಪ್ರಥಮ ಸೇವಕ ತಾನೆಂದು ನುಡಿದ ಶಾಸಕರು, ಮತ ನೀಡಿ ನಮ್ಮನ್ನು ಆಯ್ಕೆ ಮಾಡುವ ಜನರ ನಿರೀಕ್ಷೆಗಳು ಸಾಕಷ್ಟು ಇದೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ತನ್ನ ಅಧಿಕಾರದ ಅವಧಿಯಲ್ಲಿ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಕೊಡಗು ಪತ್ರಿಕಾಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕೊಡಗು ಪತ್ರಕರ್ತರ ಸಂಘದ ಪದಾಧಿಕಾರಿ ತೇಲಪಂಡ ಕವನ್ ಕಾರ್ಯಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ವಂದಿಸಿದರು.